ಕ್ರೀಡೆಗಳಲ್ಲಿ ಉತ್ಸುಕರಾಗಿ ಭಾಗವಹಿಸಲು ಸಲಹೆ

7

ಕ್ರೀಡೆಗಳಲ್ಲಿ ಉತ್ಸುಕರಾಗಿ ಭಾಗವಹಿಸಲು ಸಲಹೆ

Published:
Updated:

ಬಾಗೇಪಲ್ಲಿ: ‘ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಉತ್ಸುಕರಾಗಿ ಭಾಗವಹಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಕೃಷ್ಣ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಚಾಲೆಂಜರ್ಸ್ ಕ್ರಿಕೇಟರ್ಸ್‌ ವತಿಯಿಂದ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಟೆನಿಸ್‌ ಬಾಲ್, ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಇವತ್ತು ಪ್ರತಿಯೊಬ್ಬರು ದೈಹಿಕ, ಮಾನಸಿಕ

ವಾಗಿ ಸದೃಢರಾದಾಗ ಮಾತ್ರ ದೇಶದ ಸಂಪತ್ತನ್ನು ಸೃಷ್ಟಿಸಬಹುದಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ನಿರಂತರವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಪೋಷಕರು ಸಹಕಾರ ಹೆಚ್ಚು ಅಗತ್ಯ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹಂತದಲ್ಲಿ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ನಿತ್ಯ ಯೋಗಾಭ್ಯಾಸ ಮಾಡಬೇಕು’ ಎಂದು ಅವರು ಹೇಳಿದರು.

ಚಾಲೆಂಜರ್ಸ್ ತಂಡದ ಹಿರಿಯ ಕ್ರೀಡಾಪಟು ಡಿ.ಎನ್.ಕೃಷ್ಣಾರೆಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸೈಯದ್‍ಸಿದ್ದಿಕ್, ಪ್ರಧಾನ ಕಾರ್ಯದರ್ಶಿ ಮಣಿಕಂಠ, ಹಿರಿಯ ಪತ್ರಕರ್ತರಾದ ಬಿ.ಟಿ.ಚಂದ್ರಶೇಖರರೆಡ್ಡಿ, ಬಿಎಸ್. ಸುರೇಶ್, ಚಾಲೆಂಜರ್ಸ್ ಕ್ರಿಕೆಟರ್ಸ್‍ನ ಮೂರ್ತಿ, ಭಾಷಾ, ಶ್ರೀನಾಥ್, ಸಂಜು,ಮುಜೀಬ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry