4

ಮೋದಿಗೆ ಸ್ವಾಗತ ಕೋರಿದ ಮುಖ್ಯಮಂತ್ರಿ!

Published:
Updated:
ಮೋದಿಗೆ ಸ್ವಾಗತ ಕೋರಿದ ಮುಖ್ಯಮಂತ್ರಿ!

ಬೆಂಗಳೂರು: ‘ಹೂಡಿಕೆ, ಸಂಶೋಧನೆ ಮತ್ತು ಪ್ರಗತಿಪರ ನೀತಿಗಳಲ್ಲಿ ನಂಬರ್– 1 ಸ್ಥಾನದಲ್ಲಿರುವ ಕರ್ನಾಟಕಕ್ಕೆ ನಿಮಗೆ ಸ್ವಾಗತ. ಮಹದಾಯಿ ನೀರಿನ ಸಮಸ್ಯೆ ನಿವಾರಣೆ ಮಾಡಲು ಪ್ರಯತ್ನಿಸಿ’ ಎಂದು ಪ್ರಧಾನಿಗೆ ಮನವಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವಿಟರ್‌ನಲ್ಲೆ ತಿರುಗೇಟು ನೀಡಿರುವ ಬಿ.ಎಸ್. ಯಡಿಯೂರಪ್ಪ, ‘ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ್ದಕ್ಕೆ ಧನ್ಯವಾದ. ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ನಿಜ. ಅದು ಯಾವುದರಲ್ಲಿ ಎಂದರೆ ಭ್ರಷ್ಟಾಚಾರದಲ್ಲಿ’ ಎಂದಿದ್ದಾರೆ.

‘3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ನಿಗೂಢವಾಗಿ ಮೃತಪಟ್ಟಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗುತ್ತಿದೆ’ ಎಂದೂ ಯಡಿಯೂರ‌ಪ್ಪ ಕಿಡಿಕಾರಿದ್ದಾರೆ.

ಇದಕ್ಕೆ ಮರು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗ ಅತಿ ದೊಡ್ಡ ಗಣಿ ಹಗರಣದ ಅಧ್ಯಕ್ಷತೆ ವಹಿಸಿದ್ದವರು ಈಗ ಕರ್ನಾಟಕವನ್ನು ನಂಬರ್‌ 1 ಭ್ರಷ್ಟ ರಾಜ್ಯ ಎನ್ನುತ್ತಿದ್ದಾರೆ. ಇದು ಕರ್ನಾಟಕದ ಬಗೆಗಿನ ಅವರ ಅಭಿಮಾನಶೂನ್ಯತೆ ತೋರಿಸುತ್ತದೆ ಎಂದಿದ್ದಾರೆ.

ಪ್ರಿಯಾಂಕ್‌ ಖರ್ಗೆ ಪಾಠ:

‘ಭಾರತದ ಹೂಡಿಕೆ ಯೋಜನೆಗಳಲ್ಲಿ ಶೇ 44ರಷ್ಟು ಪಾಲು ಕರ್ನಾಟಕದ್ದೇ ಇದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಅಂಕಿ ಅಂಶವೇ ಇದನ್ನು ಹೇಳಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಟ್ವೀಟ್ ಮಾಡಿದ್ದಾರೆ.

‘2014ರಲ್ಲಿ ನಮ್ಮ ರಾಜ್ಯಕ್ಕೆ ಬಂದಾಗ ಹುಸಿ ಭರವಸೆಗಳನ್ನು ನೀಡಿದ್ದೀರಿ. ಚುನಾವಣೆ ಬಂದಾಗ ‌ಮತ್ತೆ ಬಂದಿರುವ ನೀವು, ಮತ್ಯಾವ  ಸುಳ್ಳಿನ ಕಂತೆ ತಂದಿದ್ದೀರಿ’ ಎಂದೂ ಪ್ರಶ್ನಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry