ಶುಕ್ರವಾರ, ಡಿಸೆಂಬರ್ 13, 2019
27 °C

ಸಿದ್ಧ ಉಡುಪು ಮಾರಾಟ ಅಂಗಡಿ ಸೇರಿ ಐದು ಮಳಿಗೆಗಳಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ಧ ಉಡುಪು ಮಾರಾಟ ಅಂಗಡಿ ಸೇರಿ ಐದು ಮಳಿಗೆಗಳಿಗೆ ಬೆಂಕಿ

ಕೊಟಕ್‌: ಒಡಿಶಾದ ಕೊಟಕ್‌ ನಗರದಲ್ಲಿ ಭಾನುವಾರ ಬಟ್ಟೆ ಅಂಗಡಿಗೆ ಬೆಂಕಿ ಹೊತ್ತಿಕೊಂಡು ಅಕ್ಕ ಪಕ್ಕದ ಐದು ಅಂಗಡಿಗೆ ವ್ಯಾಪಿಸಿದೆ.

ನಗರದ ಸಿದ್ಧ ಉಡುಪು ಮಾರಾಟ ಮಳಿಗೆಯೊಂದಕ್ಕೆ ಬೆಂಕಿ ಬಿದ್ದಿದ್ದು, ಅದರ ಜ್ವಾಲೆ ಪಕ್ಕದ ಅಂಗಡಿಗಳಿಗೂ ಹಬ್ಬಿದೆ. ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.

ಅಗ್ನಿ ಶಾಮಕ ದಳದ ಏಳು ವಾಹನಗಳು ಸ್ಥಳಕ್ಕಾಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ.

ಹಾನಿಯ ಮೊತ್ತ ಹಾಗೂ ಜನರಿಗೆ ತೊಂದರೆಯಾಗಿರುವ ಬಗ್ಗೆ ಮತ್ತು ಘಟನೆಗೆ ಕಾರಣ ಏನೆಂಬುದು ವರದಿಯಾಗಿಲ್ಲ.

ಪ್ರತಿಕ್ರಿಯಿಸಿ (+)