ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌: 600 ವರ್ಷಗಳ ಪುರಾತನ ₹3 ಕೋಟಿ ಮೌಲ್ಯದ ಮೂರು ವಿಗ್ರಹ ಪೊಲೀಸ್‌ ವಶಕ್ಕೆ

Last Updated 4 ಫೆಬ್ರುವರಿ 2018, 10:23 IST
ಅಕ್ಷರ ಗಾತ್ರ

ಹೈದರಾಬಾದ್‌: ಅತ್ಯಂತ ಪುರಾತನವಾದ ₹ 3 ಕೋಟಿ ಮೌಲ್ಯದ ಮೂರು ಪಂಚಲೋಹ ವಿಗ್ರಹಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಮೂರೂ ವಿಗ್ರಹಗಳನ್ನು ವಶಕ್ಕೆ ಪಡೆದಿದ್ದಾರೆ.

ಜ. 27ರಂದು ಕಾಮರೆಡ್ಡಿ ಪಟ್ಟಣದಲ್ಲಿರುವ ದೇಗುಲದಿಂದ ವಿಗ್ರಹಗಳನ್ನು ಕಳವು ಮಾಡಲಾಗಿತ್ತು.

ಹೈದರಾಬಾದ್ ಮತ್ತು ಕಾಮರೆಡ್ಡಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಒಂದೇ ವಾರದಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

ವಿಗ್ರಹಗಳು ಸುಮಾರು ಆರು ನೂರು ವರ್ಷಗಳಷ್ಟು ಹಳೆಯವು. ಆರೋಪಿಗಳು ಈ ಮೊದಲು ದೇಗುಲಗಳಿಂದ ವಿಗ್ರಹ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ವಿಗ್ರಹ ಕಳವು ಮಾಡಿದ ಬಳಿಕ ಅವರು ಕರ್ನಾಟಕಕ್ಕೆ ಹೋಗುತ್ತಿದ್ದರು. ಬಳಿಕ, ಹೈದರಾಬಾದ್‌ಗೆ ಹಿಂದಿರುಗಿ ಮಾರಾಟ ಮಾಡುತ್ತಿದ್ದರು ಎಂದು ಹೈದರಾಬಾದ್ ಪೊಲೀಸ್‌ ಕಮಿಷನರ್‌ ವಿ.ವಿ. ಶ್ರೀನಿವಾಸ ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT