ಬುಧವಾರ, ಡಿಸೆಂಬರ್ 11, 2019
23 °C

ಫುಟ್‌‍ಪಾತ್‌ನಲ್ಲಿ ವಾಸವಾಗಿದ್ದ ನಿವೃತ್ತ ಸೇನಾಧಿಕಾರಿಯ ಮೃತದೇಹ ಪತ್ತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಫುಟ್‌‍ಪಾತ್‌ನಲ್ಲಿ ವಾಸವಾಗಿದ್ದ ನಿವೃತ್ತ ಸೇನಾಧಿಕಾರಿಯ ಮೃತದೇಹ ಪತ್ತೆ

ಪುಣೆ: ಇಲ್ಲಿನ ಕಂಟೋನ್ಮೆಂಟ್‌ ಪ್ರದೇಶದಲ್ಲಿ ಫುಟ್‌‍ಪಾತ್‌ನಲ್ಲಿ ವಾಸವಾಗಿದ್ದ ನಿವೃತ್ತ ಸೇನಾಧಿಕಾರಿ ರವೀಂದ್ರ ಬಾಲಿ(67) ಅವರ ಮೃತದೇಹ ಪತ್ತೆಯಾಗಿದೆ.

ರವೀಂದ್ರ ಬಾಲಿ ಅವರು ನಗರದ ಸೇನಾ ಕ್ಯಾಂಪ್‌ ಪ್ರದೇಶದ ತಾತ್ಕಾಲಿಕ ಟೆಂಟ್‌ವೊಂದರಲ್ಲಿ ವಾಸವಾಗಿದ್ದರು. ಕಳೆದ ಗುರುವಾರ ರಾತ್ರಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಲಿ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆಯನ್ನು ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಲಷ್ಕರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಹಲವು ವರ್ಷಗಳಿಂದ ಬಾಲಿ ಅವರು ಕುಟುಂಬದಿಂದ ದೂರ ಉಳಿದಿದ್ದು, ಏಕಾಂಕಿಯಾಗಿ ಜೀವನ ನಡೆಸುತ್ತಿದ್ದರು. ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ಥಾಂತರಿಸಲು ಪ್ರಯತ್ನ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)