ಮಂಗಳವಾರ, ಡಿಸೆಂಬರ್ 10, 2019
21 °C

ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ

Published:
Updated:
ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ

ಬೆಂಗಳೂರು: ‘ಬೆಂಗಳೂರಿನ, ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಭಾಗವಹಿಸಿದ್ದ ಜನರನ್ನು ಉದ್ದೇಶಿಸಿ ಕನ್ನಡದಲ್ಲೇ ಮಾತು ಆರಂಭಿಸಿದರು.

ನಾಡ ಪ್ರಭು ಕೆಂಪೇಗೌಡ, ಶರಣ ಬಸವೇಶ್ವರರು, ಮಾದಾರ ಚನ್ನಯ್ಯ, ಸಂಗೊಳ್ಳಿ ರಾಯಣ್ಣ, ಸರ್‌.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾ ಪುರುಷರ ನಾಡು ಕರ್ನಾಟಕ ಎಂದು ಮೋದಿ ಕನ್ನಡದಲ್ಲೇ ಬಣ್ಣಿಸಿದರು.

‘ನವ ಕರ್ನಾಟಕ ಪರಿವರ್ತನೆ ಮಾಡಿ, ಬಿಜೆಪಿ ಗೆಲ್ಲಿಸಿ’ ಎಂದು ಮೋದಿ ಕನ್ನಡದಲ್ಲೇ ಜನರಿಗೆ ಕರೆಕೊಟ್ಟರು.

ಪ್ರತಿಕ್ರಿಯಿಸಿ (+)