7

ಅಮೆರಿಕದಲ್ಲಿ ‘ಪದ್ಮಾವತ್‌’ ಹವಾ

Published:
Updated:
ಅಮೆರಿಕದಲ್ಲಿ ‘ಪದ್ಮಾವತ್‌’ ಹವಾ

ವಿರೋಧಗಳನ್ನು ದಾಟಿ ತೆರೆಕಂಡಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ‘ಪದ್ಮಾವತ್‌’ ಹವಾ ಜೋರಾಗಿಯೇ ಇದೆ. ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಪದ್ಮಾವತ್‌ ಸಿನಿಮಾ ನೋಡಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಅಮೆರಿಕದಲ್ಲಿ ಚಿತ್ರ ನೋಡುವ ಸಲುವಾಗಿ ಇಡೀ ಚಿತ್ರಮಂದಿರವನ್ನೇ ಒಂದೊಂದು ಕುಟುಂಬಗಳು ಕಾಯ್ದಿರಿಸುತ್ತಿವೆಯಂತೆ.

ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಇಡೀ ಚಿತ್ರಮಂದಿರವನ್ನು ಕಾಯ್ದಿರಿಸಿತ್ತು. ಅಷ್ಟೇ ಅಲ್ಲ ಪದ್ಮಾವತ್ ಚಿತ್ರದಲ್ಲಿ ನಟ ನಟಿಯರು ಹೇಗೆಲ್ಲಾ ದಿರಿಸು ತೊಟ್ಟು ಮಿಂಚಿದ್ದಾರೆಯೋ, ಅಂತೆ ತಾವೂ ಉಡುಪು ತೊಟ್ಟು ಚಿತ್ರ ವೀಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಮಾರುಕಟ್ಟೆ ವಿಶ್ಲೇಷಕ ಕೋಮಲ್‌ ನಹ್ತಾ ಎನ್ನುವವರು ಟ್ವಿಟರ್‌ನಲ್ಲಿ ವಿಡಿಯೊವನ್ನು ಶೇರ್‌ ಮಾಡಿ ‘ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಇಡೀ ಚಿತ್ರಮಂದಿರದಲ್ಲಿ ಕುಳಿತು ಒಂದೇ ಕುಟುಂಬದ ಸದಸ್ಯರು ಚಿತ್ರ ನೋಡಿದರು. ಹೆಚ್ಚಿನವರು ಪದ್ಮಾವತಿಯಂತೆ ದಿರಿಸು ತೊಟ್ಟಿದ್ದರು. ಚಿತ್ರ ಪ್ರದರ್ಶನ ಶುರುವಾಗುವುದಕ್ಕೂ ಮುಂಚೆ ನೃತ್ಯವನ್ನೂ ಮಾಡಿದರು’ ಎಂದು ಬರೆದಿದ್ದಾರೆ.

ಅಂದಹಾಗೆ ಅಮೆರಿಕದ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಅಸೋಸಿಯೇಶನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೂಡ ಪದ್ಮಾವತ್‌ ಸಿನಿಮಾದ ಘೂಮರ್‌ ಹಾಡಿಗೆ ಕಲಾವಿದರು ನೃತ್ಯ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry