ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪಕ್ಕೂ ಒಂದು ಪಾರ್ಕ್‌

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕೋಪ ನೆತ್ತಿಗೇರಿದಾಗ ಮನಸು ತಣಿಸಲೆಂದೇ ಬಾಂಗ್ಲಾದೇಶದ ಢಾಕಾದಲ್ಲಿ ಉದ್ಯಾನವನ ನಿರ್ಮಿಸಲಾಗುತ್ತಿದೆ. ಸಿಟ್ಟಿನ ನಿರ್ವಹಣೆಗಾಗಿ ವ್ಯವಸ್ಥೆಗೊಳಿಸಲಾಗುತ್ತಿರುವ ಈ ಪಾರ್ಕ್‌ಗೆ ಹೋಗಿ ಜನರು ಸಿಟ್ಟಿನಿಂದ ಉಂಟಾಗಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಪಾರ್ಕ್ ನಿರ್ಮಿಸುತ್ತಿರುವವರ ಆಶಯ.

29 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನ ದಿನನಿತ್ಯದ ಜಂಜಾಟದಿಂದ ಜನರು ಎದುರಿಸುತ್ತಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡಲಿದೆ. ಪಾರ್ಕ್‌ನಲ್ಲಿ ಕೆರೆ, ತಿಂಡಿ ತಿನಿಸುಗಳನ್ನು ಸವಿಯುವ ಸ್ಥಳ, ಮನಸು ತಿಳಿಗೊಳಿಸುವ ಸಂಗೀತ, ಟಿ.ವಿ.ಪರದೆಗಳು ಜೊತೆಗೆ ಕಣ್ತುಂಬ ಹಸಿರು ಇರಲಿವೆ.

ಬಾಂಗ್ಲಾದೇಶೀಯರ ಪಾಲಿಗೆ ಇದು ಹೊಸ ಪರಿಕಲ್ಪನೆಯಲ್ಲ. ಅಲ್ಲಿ ಬಹುಕಾಲದಿಂದಲೂ ‘ಕೋಪದ ಗುಡಿಸಲು’ ಎನ್ನುವ ಪರಿಕಲ್ಪನೆ ಪ್ರಸಿದ್ಧಿ ಪಡೆದಿತ್ತು. ನದಿ ತಟಗಳಲ್ಲಿ ಇಂಥ ಗುಡಿಸಲು ಇರುತ್ತಿತ್ತು. ಸಿಟ್ಟಿನಿಂದ ಮನಶಾಂತಿ ಕಳೆದುಕೊಂಡವರು ಈ ಸ್ಥಳಗಳಿಗೆ ಹೋಗಿ ಸಮಾಧಾನ ಮಾಡಿಕೊಂಡು ಬರುತ್ತಿದ್ದರು. ಇದೇ ಕಲ್ಪನೆಯನ್ನಾಧರಿಸಿ ‘ಆಂಗರ್‌ ಪಾರ್ಕ್‌’ ಅನ್ನು ನಿರ್ಮಿಸಲಾಗುತ್ತಿದೆ.

‘ನಗರ ಪ್ರದೇಶಗಳಲ್ಲಿ ಬದುಕುತ್ತಿರುವವರು ಬಹುಬೇಗನೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒತ್ತಡದಾಯಕ ಜೀವನಶೈಲಿ ಎಲ್ಲದಕ್ಕೂ ಕಾರಣವಾಗುತ್ತಿದ್ದು ಖಿನ್ನತೆಗೆ ಒಳವಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಒಂದೂವರೆ ವರ್ಷದಲ್ಲಿ ಪಾರ್ಕ್‌ ಸಂಪೂರ್ಣ ಸಿದ್ಧಗೊಳ್ಳಲಿದ್ದು, ಸಾರ್ವಜನಿಕರಿಗೆ ಬಳಕೆಗೆ ಮುಕ್ತವಾಗಲಿದೆ’ ಎಂದು ಅಲ್ಲಿನ ಮೇಯರ್‌ ಖೊಕೋನ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT