ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ತಿನ್ನಿ, ಕುಡಿಯಿರಿ ಆರೋಗ್ಯವಾಗಿರಿ

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಗುಲಾಬಿ ತಿಂದು, ಕುಡಿದು, ಹಚ್ಚಿಕೊಂಡರೆ ನಿಮ್ಮ ಮೈಕಾಂತಿ ಹೂವಿನಂತೆ ಹೊಳೆಯುತ್ತೆ. ಗುಲಾಬಿ ಹೂವನ್ನೇ ಆಹಾರದ ಮತ್ತು ಲೇಪನದ ರೂಪದಲ್ಲಿ ಬಳಸುವ ಮೂಲಕ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಗುಲಾಬಿ ತಿನ್ನಲು ಇಷ್ಟೆಲ್ಲಾ ಕಾರಣಗಳಿವೆ ನೋಡಿ

ಆರೋಗ್ಯಕ್ಕೆ...

* ಮಲ ವಿಸರ್ಜನೆಯಾಗದೆ ಒದ್ದಾಡುತ್ತಿದ್ದೀರಾ? ಗುಲಾಬಿ ಹೂವಿನ ಪಕಳೆಗಳನ್ನು ಜಜ್ಜಿ ಎರಡು ಚಮಚ ರಸ ತೆಗೆದು ಒಂದು ಚಮಚ ಹಸುವಿನ ತುಪ್ಪ ಬೆರೆಸಿ ಸೇವಿಸಿ ಮಲಗಿ

* ಮಲದೊಂದಿಗೆ ರಕ್ತ ಹೋಗುತ್ತಿದೆಯೇ? ನೀರಲ್ಲಿ ನೆನಸಿಟ್ಟ ಗುಲಾಬಿ ಪಕಳೆಗಳನ್ನು ಬಿಳಿ ಕಲ್ಲುಸಕ್ಕರೆಯೊಂದಿಗೆ ಜಜ್ಜಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿ

* ನೆಗಡಿಯಿಂದ ಕಂಗೆಟ್ಟಿದ್ದೀರಾ? ಗುಲಾಬಿ ಚಹಾ ಸೇವಿಸಿ

* ಪಚ್ಚಕರ್ಪೂರ, ಬಿಳಿ ಅಥವಾ ಕೆಂಪು ಕಲ್ಲುಸಕ್ಕರೆ ಮತ್ತು ಗುಲಾಬಿ ದಳಗಳನ್ನು ನಿಧಾನಕ್ಕೆ ಜಗಿದು ರಸ ನುಂಗುತ್ತಿದ್ದರೆ ಹಲವು ದಿನಗಳಿಂದ ಕಾಡುತ್ತಿರುವ ಕೆಮ್ಮು ಎರಡೇ ದಿನದಲ್ಲಿ ನಿವಾರಣೆಯಾಗುತ್ತದೆ

* ಬಾಯಿಹುಣ್ಣಿನಿಂದ ಒದ್ದಾಡುತ್ತಿದ್ದೀರಾ? ಗುಲಾಬಿ ಹೂವಿನ ಗುಲ್ಕನ್ ತಿನ್ನಿ

* ಬಿಸಿಬಿಸಿ ಜಾಮೂನ್‌ ಸಕ್ಕರೆ ದ್ರಾವಣ ಕುಡಿದು ಉಬ್ಬಿಕೊಳ್ಳುತ್ತಿದ್ದರೆ ಬಾಯಿ ಚಪ್ಪರಿಸುವಂತಾಗುತ್ತದೆ. ಗುಲಾಬಿ ಜಲ (ರೋಸ್‌ ವಾಟರ್‌) ಬೆರೆಸಿದ ಗುಲಾಬ್‌ ಜಾಮೂನ್‌ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೌಂದರ್ಯಕ್ಕೆ...

* ಕಣ್ಣಿನ ಸುತ್ತ ಕಪ್ಪುವರ್ತುಲ ಕಾಣುತ್ತಿದೆಯೇ ಗುಲಾಬಿ ಎಣ್ಣೆಯನ್ನು (ರೋಸ್‌ ಆಯಿಲ್‌) ಕಣ್ಣಿನ ಸುತ್ತಲು ವೃತ್ತಾಕಾರವಾಗಿ ನಿಧಾನವಾಗಿ ಮಸಾಜ್‌ ಮಾಡಿ. ಒಂದೇ ವಾರದಲ್ಲಿ ಪರಿಣಾಮ ಗೊತ್ತಾಗುತ್ತದೆ

* ವಾರಕ್ಕೊಂದು ಬಾರಿ ಗುಲಾಬಿ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ಕೋಮಲವಾಗುತ್ತದೆ

* ಗುಲಾಬಿ ಎಣ್ಣೆಯ ಸುವಾಸನೆ ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯವನ್ನೂ ನೀಡುತ್ತದೆ

* ನಿದ್ದೆ ಬರುತ್ತಿಲ್ಲವೇ? ತಲೆದಿಂಬಿಗೆ ನಾಲ್ಕು ಹನಿಗುಲಾಬಿ ಜಲವನ್ನೋ (ರೋಸ್‌ ವಾಟರ್‌), ಗುಲಾಬಿ ಎಣ್ಣೆಯನ್ನೋ ಸಿಂಪಡಿಸಿ. ಸುವಾಸನೆ ಬೀರುವ ಹತ್ತಾರು ಪಕಳೆಗಳನ್ನು ದಿಂಬಿನಲ್ಲಿ ಹರಡಿಕೊಂಡು ಮಲಗಿ

* ಗುಲಾಬಿ ಜಲವನ್ನು ಪ್ರತಿದಿನ ಮುಖ, ಕತ್ತು, ಬೆನ್ನು, ಕೈ ಕಾಲಿಗೆ ಹಚ್ಚಿಕೊಳ್ಳಿ. ಒಣಗಿದ ನಂತರ ಸಾದಾ ನೀರಿನಲ್ಲಿ ತೊಳೆಯಿರಿ. ಎರಡೇ ವಾರದಲ್ಲಿ ಚರ್ಮದ ಕಾಂತಿಯಲ್ಲಿ ಬದಲಾವಣೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT