ಗುರುವಾರ , ಡಿಸೆಂಬರ್ 12, 2019
24 °C

ಟ್ವಿಟರ್‌ನಲ್ಲಿ ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಪಾಠ

Published:
Updated:
ಟ್ವಿಟರ್‌ನಲ್ಲಿ ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಪಾಠ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದ ದಿನ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಟ್ವಿಟರ್‌ ಸಮರ ಹೆಚ್ಚಾಗಿದ್ದು, ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಮೂಲಕ ಬಿಜೆಪಿಗೆ ಪಾಠ ಮಾಡಿದ್ದಾರೆ.

ಕರ್ನಾಟಕ ಬಿಜೆಪಿ ಈ ಅಂಶಗಳನ್ನು ಪ್ರಧಾನಿಗೆ ತಿಳಸಬೇಕು ಎಂದು ಹೇಳಿ ಟ್ವೀಟ್‌ ಮಾಡಿರುವ ಪ್ರಿಯಾಂಕ್ ಖರ್ಗೆ, ಭಾರತ ಹೂಡಿಕೆ ಯೋಜನೆಗಳಲ್ಲಿ ಶೇ44ರಷ್ಟು ಹಣವನ್ನು ಕರ್ನಾಟಕ ಹೊಂದಿದೆ. ಇವು ಯೂನಿಯನ್‌ ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಅಂಕಿ ಅಂಶ ಎಂದು ಹೇಳಿದ್ದಾರೆ.

ಕರ್ನಾಟಕ 2017ರಲ್ಲಿ ಮೊದಲ ಬಾರಿಗೆ 366 ಒಪ್ಪಂದಗಳನ್ನು ಮಾಡಿಕೊಂಡಿದ್ದು, ನೂರಾರು ಕೋಟಿ ಒದಗಿಸಿದೆ. ನವೋದ್ಯಮದಲ್ಲಿ ನಮ್ಮೊಂದಿಗೆ ಪಾಲುದಾರರಾಗಬೇಕು ಮತ್ತು ಗುಜರಾತ್‌ ಅಭಿವೃದ್ಧಿ ಮಾದರಿಯನ್ನು ಅನುಸರಿಸಬಾರದು ಎಂದಿದ್ದಾರೆ.

ಜತೆಗೆ, ಕರ್ನಾಟಕ ಕಾಂಗ್ರೆಸ್‌ನ ಟ್ವೀಟ್‌ವೊಂದನ್ನು ಉಲ್ಲೇಖಿಸಿ, ಮತ್ತೊಂದು ಟ್ವೀಟ್‌ ಮಾಡಿರುವ ಅವರು, ಮುಂದಿನ ಲೋಕಸಭಾ ಚುನಾವಣೆ ತನಕ ಈ ಪ್ರವೃತ್ತಿ ಮುಂದುವರೆಯಲಿದೆ ಎಂದು ನಾನು ಖಚಿತವಾಗಿ ಹೇಳುತ್ತೇನೆ ಎಂದಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿ,
ಶ್ರೀ ನರೇಂದ್ರ ಮೋದಿ ಅವರೇ,
2014ರಲ್ಲಿ ನೀವು ನಮ್ಮ ರಾಜ್ಯಕ್ಕೆ ಬಂದಾಗ ಹಲವಾರು ಹುಸಿ ಭರವಸೆ ನೀಡಿದ್ದಿರಿ. ಈಗ ಚುನಾವಣೆ ಬಂದಿರುವಾಗ ಮತ್ತೆ ಬಂದಿದ್ದೀರಾ, ಮತ್ಯಾವ ಹೊಸ ಸುಳ್ಳಿನ ಕಂತೆಯನ್ನ ಹೊತ್ತು ತಂದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)