ಭಾನುವಾರ, ಡಿಸೆಂಬರ್ 8, 2019
24 °C

ವಿದ್ಯುತ್ ಅಪಘಾತ; ಒಬ್ಬ ವ್ಯಕ್ತಿ, 11 ಜಾನುವಾರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್ ಅಪಘಾತ; ಒಬ್ಬ ವ್ಯಕ್ತಿ, 11 ಜಾನುವಾರು ಸಾವು

ತುಮಕೂರು: ತಾಲ್ಲೂಕಿನ ಮಾರನಾಯಕನಪಾಳ್ಯದ ಸಮೀಪ ಭಾನುವಾರ ಜಾನುವಾರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಮೇಲೆ  ಸಂಜೆ ವಿದ್ಯುತ್ ತಂತಿ ಬಿದ್ದು 11 ಜಾನುವಾರು ಸುಟ್ಟು ಕರಕಲಾಗಿವೆ ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಕೊರಟಗೆರೆ ತಾಲ್ಲೂಕು ತಿಗಳರಪಾಳ್ಯದ ಗಂಗಣ್ಣ(38) ಮೃತಪಟ್ಟ ವ್ಯಕ್ತಿ. ಎರಡು ಜಾನುವಾರುಗಳು ತೀವ್ರವಾಗಿ ಗಾಯಗೊಂಡಿವೆ.

ತಿಗಳರಪಾಳ್ಯದಿಂದ ಸಿದ್ಧಗಂಗಾಮಠದ ಜಾತ್ರೆಯಲ್ಲಿ ನಡೆಯುವ ದನದ ಜಾತ್ರೆಗೆ ಜಾನುವಾರುಗಳನ್ನು ತರಲಾಗುತ್ತಿತ್ತು. ವಾಹನದ ಮೇಲೆ ಹುಲ್ಲು ಇರಿಸಲಾಗಿತ್ತು.ಈ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಅಪಘಾತ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಪ್ರತಿಕ್ರಿಯಿಸಿ (+)