ಸೋಮವಾರ, ಡಿಸೆಂಬರ್ 9, 2019
24 °C

ನೀವು ನಶೆಯಲ್ಲಿ ಇದ್ದಾಗ ಹೀಗಾಗುತ್ತಾ? : ರಮ್ಯಾ ಟ್ವೀಟ್‌‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀವು ನಶೆಯಲ್ಲಿ ಇದ್ದಾಗ ಹೀಗಾಗುತ್ತಾ? : ರಮ್ಯಾ ಟ್ವೀಟ್‌‌

ಬೆಂಗಳೂರು: ಪ್ರಧಾನಿ ಮೋದಿ ಭಾನುವಾರ ಘೋಷಿಸಿದ ಟಾಪ್‌(TOP) ಉದ್ದೇಶವನ್ನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆಯಾಗಿರುವ ರಮ್ಯಾ ಪಾಟ್‌(POT) ಎಂದು ಕರೆದಿದ್ದಾರೆ.

‘ನೀವು ನಶೆಯಲ್ಲಿ ಇದ್ದಾಗ ಹೀಗಾಗುತ್ತಾ’ (Is this what happen when you POT) ಎಂದು ಪ್ರಧಾನಿ ನರೇಂದ್ರಮೋದಿ ಕುರಿತು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮಾಡಿರುವ ಟ್ವೀಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ರೈತರ ಆದಾಯ ಹೆಚ್ಚಿಸುವ ಬಗ್ಗೆ ಮೋದಿ ಮಾತನಾಡಿ, ‘ನಮ್ಮ ಸರ್ಕಾರ ತರಕಾರಿ ಬೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅದರಲ್ಲೂ ‘ಟಿಓಪಿ’(TOP) ಟೊಮೆಟೊ, ಆನಿಯನ್‌(ಈರುಳ್ಳಿ), ಪೊಟ್ಯಾಟೊ (ಆಲೂಗಡ್ಡೆ) ಕೃಷಿಗೆ ಹೆಚ್ಚಿನ ಒತ್ತು ನೀಡುತ್ತೇವೆ. ರೈತರ ಆದಾಯ ದ್ವಿಗುಣಗೊಳಿಸಲು ತರಕಾರಿ ಬೆಳೆ ಅತ್ಯುತ್ತಮ ಮಾರ್ಗ. ಇದನ್ನು ‘ಅಮೂಲ್‌’ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

TOP ಯನ್ನು POTಎಂದು ಬದಲಿಸಿ ರಮ್ಯಾ ಟ್ವೀಟ್‌ ಮಾಡಿದ್ದರು. POT ಗೆ ಮದ್ಯ ಅಥವಾ ಮಾದಕ ದ್ರವ್ಯದ ಅಮಲಿನಲ್ಲಿ ಇರುವವನು ಎಂಬ ಅರ್ಥವಿದೆ.

ಮಣಿಶಂಕರ್‌ ಅಯ್ಯರ್‌ ‘ನೀಚ್‌’ ಪದ ಬಳಸಿದಾಗ ಅವರನ್ನು ಪಕ್ಷದಿಂದ ಕಿತ್ತು ಹಾಕಿದ್ದರು. ರಮ್ಯಾ ಅವರ ಕೀಳು ಮಟ್ಟದ ಹೇಳಿಕೆ ಏಕೆ ಮೌನವಹಿಸಿದ್ದಾರೆ ಎಂದು ಇನ್ನೊಂದು ಟ್ವಿಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಟಾಪ್ ಅರ್ಥ ನಿಮಗೆ ಗೊತ್ತಿರಲ್ಲ. ಅದು ಕಷ್ಟ ಜೀವಿಗಳಿಗೆ ಮಾತ್ರ ಗೊತ್ತಿರುತ್ತೆ ಮತ್ತು ಪಾಟ್‌ ಅರ್ಥ ನಿಮಗೆ ಚೆನ್ನಾಗಿ ಗೊತ್ತು. ನಮ್ಮ ಕಡೆ ಅದಕ್ಕೆ ಚೆಂಬು ಅಂತಾರೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್‌ ಮಾಡಿದ್ದಾರೆ.

ಸದಾನಂದಗೌಡ ಅವರು ರಾಜ್ಯದಲ್ಲಿ ರೈತರ ಸಾವಿನ ಕುರಿತು ಮಾತನಾಡುವಾಗ, ತಪ್ಪಾಗಿ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸಿರುವ ವಿಡಿಯೊ ಪ್ರಕಟಿಸಿರುವ ರಮ್ಯಾ, ‘ಜನರು ಆ ವಿಡಿಯೋ ನೋಡಬಾರದು ಎಂಬ ಕಾರಣಕ್ಕೆ ನನ್ನನ್ನು ಟ್ಯಾಗ್‌ ಮಾಡಿದ್ದೀರಾ?’ ಎಂದು ಅಮಿತ್‌ ಮಾಳವಿಯಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

‘ಹಾಗೇ, ಪಿಓಟಿ ಎಂದರೆ; ಪೊಟ್ಯಾಟೊ (ಆಲೂಗಡ್ಡೆ), ಆನಿಯನ್‌(ಈರುಳ್ಳಿ), ಹಾಗೂ ಟೊಮೆಟೊ, ನೀವು ಏನೆಂದು ಯೋಚಿಸಿದ್ದಿರಿ?’ ಎಂದೂ ಟ್ವೀಟಿಸಿದ್ದಾರೆ.

ಪ್ರತಿಕ್ರಿಯಿಸಿ (+)