ಕೊಡುಗೆ ಏನು?

7

ಕೊಡುಗೆ ಏನು?

Published:
Updated:

ಕೆ.ಎನ್‌. ಭಗವಾನ್‌ ಅವರು ‘ಗೌರಿ ಸಾವನ್ನು ಸಂಭ್ರಮಿಸಿದವರು ಯಾರು’ (ವಾ.ವಾ., ಫೆ. 1) ಎಂದು ಪ್ರಶ್ನಿಸಿದ್ದಾರೆ. ವಾಸ್ತವವಾಗಿ ಗೌರಿ ಸಾವನ್ನು ಸಂಭ್ರಮಿಸಿದವರು ಇದೇ ಬುದ್ಧಿಜೀವಿಗಳೇ ಹೊರತು ಬೇರೆಯವರಲ್ಲ. ‘ಗೌರಿ ದಿನ’, ‘ನಾನು ಗೌರಿ’... ಹೀಗೆ ಕಾರ್ಯಕ್ರಮಗಳ ಮೂಲಕ ಸಭೆಯ ಮೂಲ ಉದ್ದೇಶವನ್ನು ಮರೆತು ಸಂಭ್ರಮಿಸಿದವರು ಇದೇ ಬುದ್ಧಿಜೀವಿಗಳು.

ತಲ್ಲಣ, ಬಹುತ್ವ, ಪ್ರಭುತ್ವ... ಹೀಗೆ ಜನರಿಗೆ ಅರ್ಥವಾಗದ ಭಾಷೆಯಲ್ಲಿ ಬಡಬಡಿಸುವ ಇವರ ಸಾಮಾಜಿಕ ಕೊಡುಗೆಯಾದರೂ ಏನು? ಜಾತಿ ವಿಷ ಬೀಜ ಬಿತ್ತುವುದರಲ್ಲಿ, ಧರ್ಮ ಒಡೆಯುವುದರಲ್ಲಿ ಇವರದು ಎತ್ತಿದ ಕೈ. ಗ್ರಂಥಾಲಯ, ಕಪಾಟಿನಲ್ಲಿಡಬಹುದಾದ ಪುಸ್ತಕಗಳನ್ನು ಬರೆದು ಪ್ರಶಸ್ತಿ ಪಡೆಯುವವರೂ ಇವರೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry