ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಾವಣೆ ಏಕೆ? ಸ್ಪಷ್ಟವಾಗಿ ಹೇಳಿ

ಅಕ್ಷರ ಗಾತ್ರ

ಸಂವಿಧಾನ: ಅಸಹನೆ ಏಕೆ?’ ಲೇಖನದಲ್ಲಿ (ಪ್ರ.ವಾ., ಸಂಗತ, ಫೆ. 2) ಎಚ್.ಡಿ. ಉಮಾಶಂಕರ್‌ ಅವರು ಸಂವಿಧಾನವನ್ನು ವಿರೋಧಿಸುವವರ ಬಗ್ಗೆ ಅತೃಪ್ತಿಯನ್ನು ಸರಿಯಾಗಿ ಹೊರಹಾಕಿದ್ದಾರೆ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಉನ್ನತ ಧ್ಯೆಯೋದ್ದೇಶಗಳೊಂದಿಗೆ ರೂಪಿತವಾಗಿರುವ ನಮ್ಮ ಸಂವಿಧಾನ ಯಾಕಾಗಿ ಬದಲಾಗಬೇಕು ಎಂಬ ಪ್ರಶ್ನೆಗೆ ಸಂವಿಧಾನ ವಿರೋಧಿಗಳು ನಿಖರವಾದ ಕಾರಣಗಳನ್ನು ಕೊಡಬೇಕು.

ತಮ್ಮ ಅಸಹನೆಗೆ ಕಾರಣ ‘ಜಾತಿ ಆಧಾರಿತ ಮೀಸಲಾತಿ ಹೋಗಿ ಆರ್ಥಿಕ ಆಧಾರಿತ ಮೀಸಲಾತಿ ಬರಬೇಕು ಎಂಬುದೇ ಅಥವಾ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಉದ್ದೇಶವೇ ತಪ್ಪು ಎಂಬ ಭಾವನೆಯೇ ಇಲ್ಲವೇ ಜಾತಿ– ಜಾತಿಗಳ ನಡುವಿನ ಬಹುದೊಡ್ಡ ಕಂದಕವೇ ಸರಿ ಎಂಬುದೇ’ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು. ಆಗಲಾದರೂ ಸಂವಿಧಾನ ವಿರೋಧಿಸುವವರ ಮನಸ್ಸಿನಲ್ಲೇನಿದೆ ಎನ್ನುವುದು ಎಲ್ಲರಿಗೂ ವೇದ್ಯವಾಗುತ್ತದೆ.

ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಇನ್ನೂ ಮೀಸಲಾತಿ ಮುಂದುವರೆಯುತ್ತಿರುವುದರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ಸಂವಿಧಾನದ ಆಶಯಗಳು ಈ ಎಪ್ಪತ್ತು ವರ್ಷಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ ಎಂಬುದನ್ನು ನಾವು ಮುಕ್ತವಾಗಿ, ವಸ್ತುನಿಷ್ಠವಾಗಿ ಚರ್ಚಿಸಲು ಸಿದ್ಧರಿಲ್ಲ. ಅದಕ್ಕೆ ನಾವೇ ಹೊಣೆ ಅಲ್ಲವೇ? ಅದನ್ನು ಬಿಟ್ಟು ಸಾರಾಸಗಟಾಗಿ ಸಂವಿಧಾನವನ್ನು ಬದಲಾಯಿಸಬೇಕು ಎನ್ನುವುದು ಎಷ್ಟು ಸರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT