ಸೋಮವಾರ, ಡಿಸೆಂಬರ್ 9, 2019
17 °C

ವಿಡಿಯೊ ಪ್ರಸಾರ ತಡೆ ಟ್ರಾಯ್‌ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಡಿಯೊ ಪ್ರಸಾರ ತಡೆ ಟ್ರಾಯ್‌ ಪರಿಶೀಲನೆ

ನವದೆಹಲಿ: ಆನ್‌ಲೈನ್‌ನಲ್ಲಿ ವಿಡಿಯೊ ಪ್ರಸಾರ ಮಾಡುವ ಅಮೆಜಾನ್‌ ಪ್ರೈಮ್‌, ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌ನಂತಹ ವೆಬ್‌ಸೈಟ್‌ಗಳನ್ನು ನಿಯಂತ್ರಿಸುವ ಪ್ರಸ್ತಾವನೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಪರಿಶೀಲಿಸುತ್ತಿದೆ.

ಆನ್‌ಲೈನ್‌ನಲ್ಲಿ ವಿಡಿಯೊ ಪ್ರಸಾರ ಮಾಡುವುದನ್ನು ನಿಯಂತ್ರಿಸುವುದಕ್ಕಾಗಿ ದರ ನಿಗದಿ ಮತ್ತು ಹಣಕಾಸಿನ ವ್ಯವಸ್ಥೆ ರೂಪಿಸುವಂತೆ ಕೆಲವು ದೂರ ಸಂಪರ್ಕ ಕಂಪೆನಿಗಳು ಟ್ರಾಯ್‌ಗೆ ಮನವಿ ಮಾಡಿವೆ. ಹಾಗಾಗಿ, ಈ ಬಗ್ಗೆ ಉದ್ಯಮದ ಅಭಿಪ್ರಾಯ ಕೇಳಲು ಅದು ಮುಂದಾಗಿದೆ.

ವಾಟ್ಸ್‌ಆ್ಯಪ್‌, ವೈಬರ್‌ ಮತ್ತು ಸ್ಕೈಪ್‌ನಂತಹ ಉನ್ನತ ಆನ್‌ಲೈನ್‌ ವೇದಿಕೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರೂಪಿಸಿರುವ ದಾಖಲೆಗಳಲ್ಲಿ ಆನ್‌ಲೈನ್‌ ವಿಡಿಯೊ ಪ್ರಸಾರದ ವಿಚಾರವನ್ನೂ ಅದು ಉಲ್ಲೇಖಿಸುವ ಸಾಧ್ಯತೆ ಇದೆ. ಶೀಘ್ರದಲ್ಲಿ ಅಭಿಪ್ರಾಯ ಸಂಗ್ರಹ ದಾಖಲೆಗಳನ್ನು ಅದು ಬಿಡುಗಡೆ ಮಾಡಲಿದೆ.

ತಾವು ‍ಟಿಡಿಎಚ್‌, ಕೇಬಲ್‌ ಟಿವಿ ಜಾಲ ಮೂಲಕ ನಿಗದಿತ ಶುಲ್ಕ ಪಡೆದು ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಕೆಲವು ಸಂಸ್ಥೆಗಳು/ವೆಬ್‌ಸೈಟ್‌

ಗಳು ಆನ್‌ಲೈನ್‌ನಲ್ಲಿ ಉಚಿತವಾಗಿ ‍ಪ್ರಸಾರ ಮಾಡುತ್ತವೆ ಎಂದು ದೂರಸಂಪರ್ಕ ಕ್ಷೇತ್ರದ ಕೆಲವು ಸಂಸ್ಥೆಗಳು ದೂರುತ್ತಿವೆ.

‘ಈ ಆನ್‌ಲೈನ್‌ ವಿಡಿಯೊ ಪ್ರಸಾರಕ್ಕೆ ದರ ನಿಗದಿ ಪಡಿಸುವ ಮತ್ತು ಪ್ರಸಾರಕ್ಕೂ ಮುನ್ನ ಪರವಾನಗಿ ಪಡೆಯುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ’ ಎಂದು ಉದ್ಯಮದ ಪ್ರತಿನಿಧಿಯೊಬ್ಬರು ಟ್ರಾಯ್‌ಗೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)