ಬುಧವಾರ, ಡಿಸೆಂಬರ್ 11, 2019
24 °C
ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ; ಮಿಂಚಿದ ಜ್ವೆರೆವ್‌

ಆಸ್ಟ್ರೇಲಿಯಾ ಸವಾಲು ಮೀರಿದ ಜರ್ಮನಿ

Published:
Updated:
ಆಸ್ಟ್ರೇಲಿಯಾ ಸವಾಲು ಮೀರಿದ ಜರ್ಮನಿ

ಬ್ರಿಸ್ಬೇನ್‌: ಅಲೆಕ್ಸಾಂಡರ್‌ ಜ್ವೆರೆವ್‌ ಅವರ ಮಿಂಚಿನ ಆಟದ ನೆರವಿನಿಂದ ಜರ್ಮನಿ ತಂಡ ಡೇವಿಸ್‌ ಕಪ್‌ ಟೆನಿಸ್‌ ವಿಶ್ವ ಗುಂಪಿನ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಭಾನುವಾರ ನಡೆದ ಹೋರಾಟದಲ್ಲಿ ಜರ್ಮನಿ 3–1ರಿಂದ ಆಸ್ಟ್ರೇಲಿಯಾವನ್ನು ಪರಾಭವಗೊಳಿಸಿತು. ಶನಿವಾರ ನಡೆದ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಗೆದ್ದು 2–1ರ ಮುನ್ನಡೆ ಪಡೆ ದಿದ್ದ ಜರ್ಮನಿ ಪಾಲಿಗೆ ಭಾನು ವಾರದ ಸಿಂಗಲ್ಸ್‌ ಹಣಾಹಣಿ ಮಹತ್ವದ್ದೆನಿಸಿತ್ತು.  ಇದನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿದಿದ್ದ ಜ್ವೆರೆವ್‌ 6–2, 7–6, 6–2ರಲ್ಲಿ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ಅವರನ್ನು ಪರಾಭವಗೊಳಿಸಿದರು.

ಒಂದು ಗಂಟೆ 48 ನಿಮಿಷಗಳ ಕಾಲ ನಡೆದ ಹೋರಾಟದ ಮೂರೂ ಸೆಟ್‌ ಗಳಲ್ಲಿ ಜ್ವೆರೆವ್‌ ಅಂಗಣದಲ್ಲಿ ಪ್ರಾಬಲ್ಯ ಮೆರೆದರು.

‘ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡ ವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಗಳಿಸಿದ್ದು ಖುಷಿ ನೀಡಿದೆ. ಮುಂದಿನ ಪಂದ್ಯಗಳಲ್ಲೂ ಶ್ರೇಷ್ಠ ಆಟ ಆಡಲು ಎಲ್ಲರೂ ಶ್ರಮಿಸುತ್ತೇವೆ’ ಎಂದು ಜರ್ಮನಿ ತಂಡದ ನಾಯಕ ಮೈಕಲ್‌ ಕೊಲ್ಮನ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)