ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಓಪನ್‌: ಸಿಂಧು ರನ್ನರ್ ಅಪ್‌

ಅಮೆರಿಕದ ಬೀವೆನ್ ಜಾಂಗ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಸೋತ ಕಳೆದ ಬಾರಿಯ ಚಾಂಪಿಯನ್‌ ಆಟಗಾರ್ತಿ
Last Updated 4 ಫೆಬ್ರುವರಿ 2018, 19:18 IST
ಅಕ್ಷರ ಗಾತ್ರ

ನವದೆಹಲಿ: ಭಾರಿ ಪೈಪೋಟಿಯ ಕೊನೆಯಲ್ಲಿ ಸೋತ ಭಾರತದ ಪಿ.ವಿ.ಸಿಂಧು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ರನ್ನರ್ ಅಪ್ ಆದರು.

ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಅವರನ್ನು ಅಮೆರಿಕದ ಬೀವೆನ್ ಜಾಂಗ್‌ 21–18, 11–21, 22–20ರಿಂದ ಸೋಲಿಸಿದರು. ಕಳೆದ ಬಾರಿ ಪ್ರಶಸ್ತಿ ಗೆದ್ದಿದ್ದ ಸಿಂಧು ಭಾನುವಾರ ಉತ್ತಮವಾಗಿ ಹೋರಾಡಿದರು. ಆದರೆ ಪಟ್ಟು ಬಿಡದ ಎದುರಾಳಿ ಜಯವನ್ನು ಕಸಿದು ಕೊಂಡರು.

ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ಶಿ ಯೂಕಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಅವರು ವಿಶ್ವದ ಏಳನೇ ಕ್ರಮಾಂಕದ ಆಟಗಾರ ಥೈವಾನ್‌ನ ಚೋ ಟೀನ್ ಚೆನ್‌ ವಿರುದ್ಧ 21–18, 21–14ರಿಂದ ಗೆದ್ದರು. ಪಂದ್ಯ 47 ನಿಮಿಷದಲ್ಲಿ ಮುಕ್ತಾಯಗೊಂಡಿತ್ತು. ‘ಕಳೆದ ಬಾರಿ ನನಗೆ ಯಾವುದೇ ಟೂರ್ನಿಯಲ್ಲಿ ಗೆಲ್ಲಲು ಆಗಲಿಲ್ಲ. ಈ ವರ್ಷದ ಆರಂಭದಲ್ಲೇ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ ಎಂದು ವಿಶ್ವದ ಎಂಟನೇ ಕ್ರಮಾಂಕದ ಆಟಗಾರ ಯೂಕಿ ಹೇಳಿದರು.

‘ಚೋ ಟೀನ್ ಚೆನ್‌ ವಿರುದ್ಧ ಈ ಹಿಂದೆಯೂ ಆಡಿದ್ದೆ. ಆ ಪಂದ್ಯಗಳನ್ನು ಪದೇ ಪದೇ ವೀಕ್ಷಿಸಿ ವಿಶ್ಷೇಷಣೆ ಮಾಡಿದೆ ಮತ್ತು ತಂತ್ರಗಳನ್ನು ಹೆಣೆದೆ. ಇದು ಸುಲಭ ಜಯಕ್ಕೆ ಕಾರಣವಾಯಿತು’ ಎಂದು ಅವರು ವಿವರಿಸಿದರು.

ಮಿಶ್ರ ಡಬಲ್ಸ್‌: ಡೆನ್ಮಾರ್ಕ್ ಜೋಡಿಗೆ ಪ್ರಶಸ್ತಿ: ಮಿಶ್ರ ಡಬಲ್ಸ್‌ನಲ್ಲಿ ಡೆನ್ಮಾರ್ಕ್‌ ಜೋಡಿ ಮಥಾಯಸ್‌ ಕ್ರಿಸ್ಟಿಯಾನ್‌ಸೆನ್‌ ಮತ್ತು ಕ್ರಿಸ್ಟಿನಾ ಪೆಡರ್ಸನ್‌ ಪ್ರಶಸ್ತಿಗೆ ಮುತ್ತು ನೀಡಿದರು. ಇಂಡೊನೇಷ್ಯಾದ ಪ್ರವೀಣ್‌ ಜೋರ್ಡಾನ್‌ ಮತ್ತು ಮೆಲಾತಿ ದೇವಾ ಒಕ್ಟವ್ಯಾಂಟಿ ಅವರ ವಿರುದ್ಧದ ಪಂದ್ಯದಲ್ಲಿ ಈ ಜೋಡಿ 21–14, 21–15ರಲ್ಲಿ ಗೆದ್ದಿತು. 37 ನಿಮಿಷಗಳ ಸೆಣಸಾಟದಲ್ಲಿ ಗೆದ್ದ ಇವರು ಮೊದಲ ಪ್ರಶಸ್ತಿಯ ಸಂಭ್ರಮದಲ್ಲಿ ಮಿಂದೆದ್ದರು.

ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಇಂಡೊನೇಷ್ಯಾದ ಗ್ರೇಸಿಯಾ ಪೊಲ್ಲಿ ಮತ್ತು ಅಪ್ರಿಯಾನಿ ರಹಾಯು ಅವರ ಪಾಲಾಯಿತು. ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಜೊಂಕೊಲ್ಫಾನ್‌ ಕಿಟಿತಾರಕುಲ್‌ ಮತ್ತು ರವಿಂದ ಪ್ರಜೋಂಗೈ ಅವರನ್ನು 21–18, 21–15ರಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT