ಮುಂದುವರಿದ ಎಎನ್‌ಎಫ್‌ ಶೋಧ

7

ಮುಂದುವರಿದ ಎಎನ್‌ಎಫ್‌ ಶೋಧ

Published:
Updated:

ಮಡಿಕೇರಿ: ಕೊಡಗು– ದಕ್ಷಿಣ ಕನ್ನಡ ಜಿಲ್ಲೆಯ ಗಡಿಗ್ರಾಮಗಳಲ್ಲಿ ಬೀಡುಬಿಟ್ಟಿರುವ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಹಾಗೂ ಜಿಲ್ಲಾ ಪೊಲೀಸರು, ಅರಣ್ಯ ಪ್ರದೇಶದಲ್ಲಿ ಶಂಕಿತ ನಕ್ಸಲರಿಗಾಗಿ ಭಾನುವಾರವೂ ಕಾರ್ಯಾಚರಣೆ ನಡೆಸಿದರು.

ಶುಕ್ರವಾರ ರಾತ್ರಿ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯನಾಡು ಸಮೀಪದ ಗುಡ್ಡಗದ್ದೆಯ ನಾಲ್ಕು ಮನೆಗಳಿಗೆ ನಕ್ಸಲರೆಂದು ಹೇಳಿಕೊಂಡು ಬಂದ ಶಸ್ತ್ರಸಜ್ಜಿತ ಮೂವರು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದರು. ಅಲ್ಲಿನ ನಿವಾಸಿಗಳಿಗೂ ಬೆದರಿಕೆ ಒಡ್ಡಿದ್ದರು. ಅಕ್ಕಿ, ಉಪ್ಪು, ಖಾರದಪುಡಿ ಸಂಗ್ರಹಿಸಿ ತೆರಳಿದ್ದರು. ಎರಡು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದರೂ ಎಎನ್‌ಎಫ್‌ಗೆ ಯಾವುದೇ ಸುಳಿವು ಲಭಿಸಿಲ್ಲ.

‘ಸ್ಥಳೀಯ ನಿವಾಸಿಗಳಿಗೆ ಶಂಕಿತ ನಕ್ಸಲರ ಭಾವಚಿತ್ರ ತೋರಿಸಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗಿದೆ. ನಕ್ಸಲ್‌ ನಾಯಕ ವಿಕ್ರಂಗೌಡ ಸಹ ಇದ್ದ ಎಂಬುದು ದೃಢಪಟ್ಟಿದೆ. ಇನ್ನೂ ಕೆಲವು ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry