ಕರ್ನಾಟಕ ಸಂಘ: ಪುಸ್ತಕ ಬಹುಮಾನಕ್ಕೆ ಆಹ್ವಾನ

6

ಕರ್ನಾಟಕ ಸಂಘ: ಪುಸ್ತಕ ಬಹುಮಾನಕ್ಕೆ ಆಹ್ವಾನ

Published:
Updated:

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘವು 2017ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು, ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.

ಕಾದಂಬರಿ ವಿಭಾಗದಲ್ಲಿ ಕುವೆಂಪು ಪ್ರಶಸ್ತಿ, ಅನುವಾದಿತ ಕೃತಿಗೆ ಎಸ್.ವಿ. ಪರಮೇಶ್ವರ ಭಟ್ಟ, ಮಹಿಳಾ ಸಾಹಿತ್ಯಕ್ಕೆ ಎಂ.ಕೆ. ಇಂದಿರಾ, ಮುಸ್ಲಿಂ ಬರಹಗಾರರ ಕೃತಿಗಳಿಗೆ ಪಿ.ಲಂಕೇಶ್, ಕವನ ಸಂಕಲನಕ್ಕೆ ಜಿ.ಎಸ್. ಶಿವರುದ್ರಪ್ಪ, ಅಂಕಣ ಬರಹಗಾರರಿಗೆ ಹಾ.ಮಾ. ನಾಯಕ, ಸಣ್ಣ ಕಥಾ ಸಂಕಲನಕ್ಕೆ ಯು. ಆರ್. ಅನಂತಮೂರ್ತಿ, ನಾಟಕ ಕೃತಿಗೆ ಕೆ.ವಿ. ಸುಬ್ಬಣ್ಣ, ಪ್ರವಾಸ ಪುಸ್ತಕಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ, ವಿಜ್ಞಾನಕ್ಕೆ ಹಸೂಡಿ ವೆಂಕಟಶಾಸ್ತ್ರಿ, ಮಕ್ಕಳ ಸಾಹಿತ್ಯಕ್ಕೆ ಡಾ.ನಾ. ಡಿಸೋಜ, ವೈದ್ಯ ಸಾಹಿತ್ಯಕ್ಕೆ ಎಚ್.ಡಿ. ಚಂದ್ರಪ್ಪಗೌಡ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗಳು ತಲಾ ₹ 10 ಸಾವಿರ ನಗದನ್ನು ಒಳಗೊಂಡಿವೆ.

ಮರು ಮುದ್ರಣಗೊಂಡ ಕೃತಿಗಳು, ಹಸ್ತ ಪ್ರತಿ, ಸಂಪಾದಿತ ಕೃತಿಗಳಿಗೆ ಅವಕಾಶವಿಲ್ಲ. ಈ ಹಿಂದೆ ಪ್ರಶಸ್ತಿ ಪಡೆದವರೂ ಪುಸ್ತಕ ಕಳುಹಿಸಬಹುದು.

ತಲಾ ಮೂರು ಪ್ರತಿಗಳನ್ನು ಮಾರ್ಚ್‌ 15ರ ಒಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ- 577201 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ: 08182–277406 ಸಂಪರ್ಕಿಸಬಹುದು ಎಂದು ಸಂಘದ ಗೌರವ ಕಾರ್ಯದರ್ಶಿ ಎಚ್.ಎಸ್. ನಾಗಭೂಷಣ್‌ ಪ್ರಕಟಣೆಯಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry