ಸೋಮವಾರ, ಡಿಸೆಂಬರ್ 9, 2019
24 °C

ಮಾಲ್ಡೀವ್ಸ್: ಸುಪ್ರೀಂ ಕೋರ್ಟ್‌ಗೆ ಸರ್ಕಾರದ ಸವಾಲು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಾಲ್ಡೀವ್ಸ್: ಸುಪ್ರೀಂ ಕೋರ್ಟ್‌ಗೆ ಸರ್ಕಾರದ ಸವಾಲು

ಮಾಲೆ: ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರನ್ನು ಬಂಧಿಸಲು ಸುಪ್ರೀಂ ಕೋರ್ಟ್ ಆದೇಶಿಸಿದರೆ ಅದನ್ನು ತಿರಸ್ಕರಿಸುವಂತೆ ಪೊಲೀಸ್ ಮತ್ತು ಸೈನಿಕರಿಗೆ ಮಾಲ್ಡೀವ್ಸ್ ಸರ್ಕಾರವು ಭಾನುವಾರ ಆದೇಶಿಸಿದೆ.

ರಾಜಕೀಯ ಕೈದಿಗಳು ಹಾಗೂ 12 ಜನಪ್ರತಿನಿಧಿಗಳನ್ನು ಪಕ್ಷದಿಂದ ವಜಾ ಮಾಡುವ ಆದೇಶವನ್ನು ಕೈಬಿಡಬೇಕು ಎಂದು ನ್ಯಾಯಾಲಯ ಕಳೆದ ಗುರುವಾರ ಆದೇಶಿಸಿತ್ತು. ಸರ್ಕಾರ ಈ ಆದೇಶವನ್ನು ಧಿಕ್ಕರಿಸಿದೆ.

‘ಅಧ್ಯಕ್ಷರನ್ನು ಬಂಧಿಸುವ ಸುಪ್ರೀಂ ಕೋರ್ಟ್ ಆದೇಶವು ಕಾನೂನು ಬಾಹಿರವಾಗುತ್ತದೆ’ ಎಂದು ಅಟಾರ್ನಿ ಜನರಲ್ ಮಹಮ್ಮದ್ ಅನಿಲ್ ಅವರು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)