ತಾಯಿ, ಮಗನ ಹತ್ಯೆ: ಮಾಹಿತಿ ನೀಡಿದರೆ ಬಹುಮಾನ

7

ತಾಯಿ, ಮಗನ ಹತ್ಯೆ: ಮಾಹಿತಿ ನೀಡಿದರೆ ಬಹುಮಾನ

Published:
Updated:

ವಾಷಿಂಗ್ಟನ್: ಭಾರತ ಸಂಜಾತ ಮಹಿಳೆ ಮಾಲಾ ಮನ್ವಾನಿ (65) ಹಾಗೂ ಅವರ ಮಗ ರಿಷಿ ಮನ್ವಾನಿ (32) ಅವರ ಹತ್ಯೆ ಸಂಬಂಧ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಅಮೆರಿಕದ ಪೊಲೀಸರು ಘೋಷಣೆ ಮಾಡಿದ್ದಾರೆ.

ವಾಷಿಂಗ್ಟನ್‌ ಡಿ.ಸಿ. ಉಪನಗರದ ಮನೆಯಲ್ಲಿ ಇವರಿಬ್ಬರನ್ನೂ ಇತ್ತೀಚೆಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ‘ಅವಳಿ ಹತ್ಯೆಗಳ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದು, ಅಂತಹವರು ತಮ್ಮ ಹೆಸರನ್ನು ಗೋಪ್ಯವಾಗಿ ಇಡಲು ಬಯಸಿದರೆ ಹಾಗೇ ಮಾಡಲಾಗುವುದು’ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry