ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿ: ಆರಂಭಕ್ಕೂ ಮುನ್ನವೇ ಟೀಕೆ

Last Updated 4 ಫೆಬ್ರುವರಿ 2018, 19:28 IST
ಅಕ್ಷರ ಗಾತ್ರ

ವಾಷಿಂಗ್ಟನ್: 2020ರಲ್ಲಿ ಜನಗಣತಿ ನಡೆಸಲು ಅಮೆರಿಕ ಸಿದ್ಧತೆ ನಡೆಸಿದೆ. ಆದರೆ ಜನಗಣತಿ ಆರಂಭಕ್ಕೂ ಮುನ್ನವೇ ನಾಗರಿಕತ್ವದ ಪ್ರಶ್ನೆ ತಲೆದೋರಿದ್ದು, ಚರ್ಚೆಯನ್ನು ಹುಟ್ಟುಹಾಕಿದೆ.

‘ನೀವು ಅಮೆರಿಕದ ನಾಗರಿಕರೇ’ ಎಂದು ಜನಗಣತಿ ನಡೆಸುವವರು ಪ್ರಶ್ನೆ ಕೇಳಿದಾಗ ಜನಾಂಗೀಯ ಅಲ್ಪಸಂಖ್ಯಾತರು ಮಾಹಿತಿ ನೀಡಲು ನಿರಾಕರಿಸಬಹುದು; ಆಗ ಜನಗಣತಿಯಿಂದ ಲಭ್ಯವಾದ ದತ್ತಾಂಶವು ನಿಖರತೆಯಿಂದ ದೂರವಾಗಬಹುದು’ ಎಂಬ ಅನುಮಾನ ಎದುರಾಗಿದೆ.

ಗಡಿಪಾರಾಗುವ ಬೆದರಿಕೆ ಎದುರಿಸುತ್ತಿರುವ ವಲಸಿಗ ಕುಟುಂಬವು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂಜರಿಯಬಹುದು. ತಮ್ಮ ಮೇಲೆ ಕ್ರಮ ಕೈಗೊಳ್ಳಲು ಈ ಮಾಹಿತಿಯನ್ನು ಬಳಸಿಕೊಳ್ಳಬಹುದು ಎಂಬ ಆತಂಕ ಅವರಿಗಿದೆ ಎಂದು ಹೇಳಲಾಗಿದೆ.

‘ನಾಗರಿಕತ್ವದ ಮಾಹಿತಿಯು ಮತದಾನ ಹಕ್ಕು ಕಾಯ್ದೆ ಜಾರಿಗೆ ನೆರವಾಗುತ್ತದೆ. ಈ ಕಾಯ್ದೆಯು ಜನಾಂಗೀಯ ತಾರತಮ್ಯ ನಿವಾರಿಸುತ್ತದೆ. ಹೀಗಾಗಿ ಜನಗಣತಿಯಲ್ಲಿ ನಾಗರಿಕತ್ವದ ಮಾಹಿತಿಯನ್ನೂ ಸೇರಿಸಬೇಕು’ ಎಂದು ಕಾನೂನು ವಿಭಾಗವು ಜನಗಣತಿ ಬ್ಯೂರೊಕ್ಕೆ ಡಿಸೆಂಬರ್‌ನಲ್ಲಿ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT