ಗುರುವಾರ , ಜೂನ್ 4, 2020
27 °C
ಹೊಸ ತಂತ್ರಜ್ಞಾನ ರೂಪಿಸುವಲ್ಲಿ ನಿರತರಾಗಿರುವ ಸಂಶೋಧಕರು

‘ಬ್ಲೂ ವೇಲ್’ ತಡೆಗೆ ಹೊಸ ತಂತ್ರಜ್ಞಾನ

ಪಿಟಿಐ Updated:

ಅಕ್ಷರ ಗಾತ್ರ : | |

‘ಬ್ಲೂ ವೇಲ್’ ತಡೆಗೆ ಹೊಸ ತಂತ್ರಜ್ಞಾನ

ನವದೆಹಲಿ: ಮಕ್ಕಳನ್ನು ಸಾವಿನ ಮನೆಗೆ ನೂಕುವ ‘ಬ್ಲೂ ವೇಲ್’ ಆಟದ ತಂತ್ರಜ್ಞಾನವನ್ನೇ ಬಳಸಿಕೊಂಡು ಅವರ ಜೀವ ರಕ್ಷಣೆ ಮಾಡುವ ಮತ್ತು ಅವರು ಆ ಆಟದಿಂದ ವಿಮುಖರಾಗುವಂತೆ ಮಾಡಲು ಹೊಸ ತಂತ್ರಜ್ಞಾನ ಕಂಡುಹಿಡಿಯುವ ಕಾರ್ಯಯೋಜನೆಯೊಂದು ನಡೆಯುತ್ತಿದೆ.

ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯ ಸಂಶೋಧಕರು ಕಳೆದ ಸೆಪ್ಟೆಂಬರ್‌ನಿಂದ ಈ ಕುರಿತ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.

‘ಬ್ಲೂ ವೇಲ್’ ಆಟದ ಪ್ರಚೋದನೆಗೆ ಒಳಗಾಗುವವರು ಮತ್ತು ಇದರ ಸಂತ್ರಸ್ತರು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿರುತ್ತಾರೆ. ಇವರನ್ನು ಪತ್ತೆಹಚ್ಚುವುದು ಈ ಯೋಜನೆಯ ಉದ್ದೇಶ’ ಎಂದು ಸಂಶೋಧಕ ಪೊನ್ನುರಂಗಮ್ ಕುಮಾರಗುರು ಹೇಳಿದ್ದಾರೆ.

‘ಈ ಆಟ ಆಡಲು ಇಚ್ಛಿಸುವವರು, ‘ಐ ವಾಂಟ್ ಟು ಪ್ಲೇ’ ಅಥವಾ ‘ಆ್ಯಡ್ ಮಿ ಇಂಟು ದಿ ಗೇಮ್/ ಗ್ರೂಪ್’ ಎಂದು ಸಂದೇಶ ರವಾನಿಸುತ್ತಾರೆ. ಆಟವನ್ನು ಬೇರೆಯವರಿಗೆ ‍ಪರಿಚಯಿಸುವವರು, ‘ಹಾಯ್ ಫಾಲೋ ಮಿ ಇಫ್ ಯು ವಾಂಟ್ ಟು ಪ್ಲೇ’ ಎಂಬ ಸಂದೇಶಗಳನ್ನು ಹರಿಬಿಡುತ್ತಾರೆ ಎಂಬುದು ತಿಳಿದುಬಂದಿದೆ’ ಎಂದು ಅವರು ತಿಳಿಸಿದ್ದಾರೆ.

‘ರಷ್ಯಾದ ಸಾಮಾಜಿಕ ಜಾಲತಾಣ ‘VKontakt’ಕ್ಕೆ ಸೀಮಿತವಾಗಿದ್ದ ಬ್ಲೂ ವೇಲ್ ಆಟವು ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತಿತರ ಜನಪ್ರಿಯ ಸಾಮಾಜಿಕ ಜಾಲತಾಣಗಳಿಗೂ ಹರಡಿದೆ. ಇದನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ’ ಎಂದಿದ್ದಾರೆ.

‘ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಂತರ ಅದನ್ನು ಅಂತರ್ಜಾಲ ಶೋಧಯಂತ್ರದ (ಬ್ರೌಸರ್) ಜೊತೆ ಅಳವಡಿಸಬಹುದು ಅಥವಾ ಕಂಪನಿಗಳು ತಮ್ಮ ಸರ್ವರ್‌ನಲ್ಲಿಯೂ ಅಳವಡಿಸಬಹುದು’ ಎಂದು ಹೇಳಿದ್ದಾರೆ.

ಬ್ಲೂ ವೇಲ್ ಆಟಕ್ಕೆ ಅಂದಾಜು 170 ಜನ ಬಲಿಯಾಗಿದ್ದಾರೆ. ಇದರಲ್ಲಿ 10 ಮಂದಿ ಭಾರತದವರಾಗಿದ್ದಾರೆ ಎಂಬುದನ್ನು ಸಂಶೋಧನಾ ತಂಡ ಕಂಡುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.