ಲಿಂಗಪರಿವರ್ತಿತರಿಗೆ ಕಲ್ಯಾಣ ಮಂಡಳಿ

7

ಲಿಂಗಪರಿವರ್ತಿತರಿಗೆ ಕಲ್ಯಾಣ ಮಂಡಳಿ

Published:
Updated:

ಮುಂಬೈ: ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ‘ಲಿಂಗಪರಿವರ್ತಿತರ ಕಲ್ಯಾಣ ಮಂಡಳಿ’ (ಟಿಡಬ್ಲ್ಯುಬಿ) ರಚನೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಈ ಸಮುದಾಯದ ಕಲ್ಯಾಣಕ್ಕೆ ₹ 5 ಕೋಟಿ ಮೀಸಲಿರಿಸಿದೆ.

‘ಒಂದು ತಿಂಗಳೊಳಗೆ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಲಿಂಗಪರಿವರ್ತನೆಗೆ ಒಳಗಾದವರಿಗೆ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರೋಗ್ಯ ಯೋಜನೆಗಳನ್ನು ಕಲ್ಪಿಸಲು ಮಂಡಳಿಯು ನೆರವಾಗಲಿದೆ. ಜೊತೆಗೆ ಅವರ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲಿದೆ’ ಎಂದು ಸಾಮಾಜಿಕ ನ್ಯಾಯ ಸಚಿವ ದಿಲೀಪ್‌ ಕಾಂಬ್ಳೆ ತಿಳಿಸಿದ್ದಾರೆ.

ಇದರೊಂದಿಗೆ ಮಹಾರಾಷ್ಟ್ರವು, ಲಿಂಗಪರಿವರ್ತನೆಗೆ ಒಳಗಾದವರಿಗಾಗಿ ಕಲ್ಯಾಣ ಮಂಡಳಿ ಸ್ಥಾಪಿಸಿದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಮಂಡಳಿ ರಚನೆ ವಿಚಾರ ಹಿಂದಿನ ಸರ್ಕಾರದ ಅವಧಿಯಲ್ಲಿ ಮೊಳಕೆಯೊಡೆದಿತ್ತು. ಆದರೆ 2014ರಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಪ್ರಸ್ತಾವ ಮೂಲೆಗುಂಪಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry