ಬುಧವಾರ, ಡಿಸೆಂಬರ್ 11, 2019
19 °C

ನ್ಯಾಯಮೂರ್ತಿ ಮುಂದೆ ‘ಪದ್ಮಾವತ್‌’ ಪ್ರದರ್ಶನ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಮೂರ್ತಿ ಮುಂದೆ ‘ಪದ್ಮಾವತ್‌’ ಪ್ರದರ್ಶನ ಇಂದು

ಜೈಪುರ: ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿ ಸಂದೀಪ್‌ ಮೆಹ್ತಾ ಹಾಗೂ ನ್ಯಾಯಾಂಗದ ಇತರ ಅಧಿಕಾರಿಗಳಿಗಾಗಿ ಸೋಮವಾರ ಜೈಪುರದ ಚಿತ್ರಮಂದಿರವೊಂದರಲ್ಲಿ ‘ಪದ್ಮಾವತ್‌’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

ಡೀಡ್ವಣಾ ಪೊಲೀಸ್‌ ಠಾಣೆಯಲ್ಲಿ 2017ರಲ್ಲಿ ನಟಿ ದೀಪಿಕಾ ಪಡುಕೋಣೆ, ನಟ ರಣವೀರ್‌ ಸಿಂಗ್‌ ಮತ್ತು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಚಿತ್ರದ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಚಿತ್ರ ಪ್ರದರ್ಶನಕ್ಕಾಗಿ ಸ್ಥಳೀಯ ಆಡಳಿತ ಭದ್ರತಾ ವ್ಯವಸ್ಥೆ ಕೈಗೊಂಡಿದೆ.

‘ನ್ಯಾಯದ ಬಗ್ಗೆ ತೀರ್ಮಾನ ಮಾಡಬೇಕಾದರೆ ಚಿತ್ರ ವೀಕ್ಷಿಸಲೇ ಬೇಕು’ ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದ್ದರು.

ಪ್ರತಿಕ್ರಿಯಿಸಿ (+)