ಬುಧವಾರ, ಡಿಸೆಂಬರ್ 11, 2019
16 °C

ಪೊಲೀಸರಿಗೆ ಕಳಪೆ ಗುಂಡು ನಿರೋಧಕ ಜಾಕೆಟ್!

ಪಿಟಿಐ Updated:

ಅಕ್ಷರ ಗಾತ್ರ : | |

ಪೊಲೀಸರಿಗೆ ಕಳಪೆ ಗುಂಡು ನಿರೋಧಕ ಜಾಕೆಟ್!

ಮುಂಬೈ: 26/11 ಉಗ್ರರ ದಾಳಿಯ ನಂತರ ಮಹಾರಾಷ್ಟ್ರ ಪೊಲೀಸರಿಗೆ ವಿತರಿಸಲಾಗಿದ್ದ 4,600 ಗುಂಡು ನಿರೋಧಕ ಜಾಕೆಟ್‌ಗಳ ಪೈಕಿ 1,430 ಜಾಕೆಟ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ.

‘ಎಕೆ–47 ಗುಂಡುಗಳ ಪರೀಕ್ಷೆಯಲ್ಲಿ ವಿಫಲಗೊಂಡ ಜಾಕೆಟ್‌ಗಳನ್ನು ಅವುಗಳನ್ನು ತಯಾರಿಸಿದ ಸಂಸ್ಥೆಗೇ ಮರಳಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ವಿ.ವಿ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ. ₹ 17 ಕೋಟಿ ವೆಚ್ಚದಲ್ಲಿ 4,600 ಜಾಕೆಟ್‌ಗಳನ್ನು ಖರೀದಿಸಲಾಗಿತ್ತು.

2008ರಲ್ಲಿ ನಡೆದ ಉಗ್ರರ ದಾಳಿಯ ವೇಳೆ ಕಳಪೆ ಗುಣಮಟ್ಟದ ಗುಂಡು ನಿರೋಧಕ ಜಾಕೆಟ್‌ ಧರಿಸಿದ್ದರಿಂದ ಮೇಜರ್ ಹೇಮಂತ್ ಕರ್ಕರೆ ಸಾವನ್ನಪ್ಪಿದ್ದರು ಎಂಬ ಆರೋಪವು ಭಾರಿ ಚರ್ಚೆಗೆ ಕಾರಣವಾಗಿತ್ತು.

ಪ್ರತಿಕ್ರಿಯಿಸಿ (+)