ಮಾಹಿತಿ ಬಹಿರಂಗ: ಸೇನಾಧಿಕಾರಿ ಮೇಲಿನ ಪ್ರಕರಣ ಕೈಬಿಟ್ಟ ಸಿಬಿಐ

7

ಮಾಹಿತಿ ಬಹಿರಂಗ: ಸೇನಾಧಿಕಾರಿ ಮೇಲಿನ ಪ್ರಕರಣ ಕೈಬಿಟ್ಟ ಸಿಬಿಐ

Published:
Updated:

ನವದೆಹಲಿ: ಯುದ್ಧಕ್ಕೆ ಸಂಬಂಧಿಸಿದ ನೌಕಾಪಡೆಯ ಮಾಹಿತಿಯನ್ನು ಬಹಿರಂಗಪಡಿಸಿದ ಆರೋಪದಲ್ಲಿ ಸೇವೆಯಿಂದ ವಜಾಗೊಂಡಿದ್ದ ಕ್ಯಾಪ್ಟನ್ ಕಶ್ಯಪ್ ಕುಮಾರ್ ಅವರ ಮೇಲಿನ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಸಿಬಿಐ ವರದಿ ಸಲ್ಲಿಸಿದೆ.

ಮಾಹಿತಿ ಬಹಿರಂಗ ಮಾಡಿದ್ದರು ಎಂಬ ಕಾರಣಕ್ಕೆ ಕಶ್ಯಪ್ ಅವರನ್ನು ರಾಷ್ಟ್ರಪತಿಯವರ ವಿಶೇಷಾಧಿಕಾರ ಬಳಸಿ 2005ರಲ್ಲಿ ವಜಾ ಮಾಡಲಾಗಿತ್ತು.

ತಮ್ಮ ಮೇಲಿನ ಎಫ್ಐಆರ್ ರದ್ದು ಪಡಿಸಬೇಕು ಎಂದು ಕಶ್ಯಪ್ (58) ಅವರು 2005ರ ನವೆಂಬರ್‌ನಲ್ಲಿ ಸೇನಾ ಟ್ರಿಬ್ಯುನಲ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕಳೆದ ವರ್ಷ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ಅರ್ಜಿಯ ವಿಲೇವಾರಿ ಮಾಡಿದ ನ್ಯಾಯಾಲಯವು, ‘ಅರ್ಜಿದಾರರ ಮೇಲಿನ ಪ್ರಕರಣದ ತನಿಖೆ ಮುಗಿದಿದೆ ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದೆ’ ಎಂದು ತಿಳಿಸಿದೆ.

ಪ್ರಕರಣ ಕೈಬಿಡಲಾಗಿದೆ ಎಂದು ಕಳೆದ ವರ್ಷವೇ ದೆಹಲಿ ಹೈಕೋರ್ಟ್ ಮತ್ತು ಸಂಬಂಧಿಸಿದ ನ್ಯಾಯಾಲಯಕ್ಕೆ ಸಿಬಿಐ ಸದ್ದಿಲ್ಲದೇ ವರದಿ ಸಲ್ಲಿಸಿತ್ತು. ಕಶ್ಯಪ್ ಅಲ್ಲದೆ ಇನ್ನೂ ಆರು ಅಧಿಕಾರಿಗಳ ವಿರುದ್ಧ 2006ರಲ್ಲಿ ದೋಷಾರೋಪ ನಿಗದಿ ಮಾಡಲಾಗಿತ್ತು.

ಸಂಕೋಚ ಸ್ವಭಾವದ ಕಶ್ಯಪ್ ಅವರು ಕೆಲಸ ಕಳೆದುಕೊಂಡ ನಂತರ ತಮ್ಮ ಹಿನ್ನೆಲೆಯ ಕಾರಣಕ್ಕೆ ಹಲವು ಕೆಲಸಗಳನ್ನು ಕಳೆದುಕೊಂಡರು. ಕುಟುಂಬದ ಪೋಷಣೆಗಾಗಿ ಕಡಿಮೆ ಸಂಬಳದ ಉದ್ಯೋಗಕ್ಕೆ ಸೇರಿದರು. ಬೇರೆಯವರ ಹೊಲದಲ್ಲಿಯೂ ಕೆಲಸ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry