ಶುಕ್ರವಾರ, ಡಿಸೆಂಬರ್ 13, 2019
27 °C

2014ರಲ್ಲಿ ಮಾರಾಟವಾದ ಪ್ರಾಮಿಸ್‌ ಟೂತ್ ಪೇಸ್ಟ್‌ ಬ್ರಶ್‌ ಮಾಡುವುದನ್ನು ಮರೆತಿದೆ! ಪ್ರಕಾಶ್ ರಾಜ್ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2014ರಲ್ಲಿ ಮಾರಾಟವಾದ ಪ್ರಾಮಿಸ್‌ ಟೂತ್ ಪೇಸ್ಟ್‌ ಬ್ರಶ್‌ ಮಾಡುವುದನ್ನು ಮರೆತಿದೆ! ಪ್ರಕಾಶ್ ರಾಜ್ ವ್ಯಂಗ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್‌ ( ಪ್ರಕಾಶ್ ರೈ) ಟೀಕಾ ಪ್ರಹಾರ ಮುಂದುವರೆಸಿದ್ದು ‘2014ರಲ್ಲಿ ಮಾರಾಟವಾದ ಪ್ರಾಮಿಸ್‌ ಟೂತ್‌ ಪೇಸ್ಟ್‌ ರೈತರು ಮತ್ತು ನಿರುದ್ಯೋಗಿಗಳ ಮುಖದಲ್ಲಿ ಮಂದಹಾಸ ತರುವಲ್ಲಿ ವಿಫಲವಾಗಿದ್ದು ಅದನ್ನು ಮತ್ತೆ ಕರ್ನಾಟಕದಲ್ಲಿ ಮಾರಾಟ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಭಾನುವಾರ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ವಿರುದ್ಧ ಪ್ರಕಾಶ್ ರಾಜ್‌ ಟ್ವಿಟರ್‌ನಲ್ಲಿ ಟೀಕೆ ಮಾಡಿದ್ದಾರೆ.

2014ರಲ್ಲಿ ಮಾರಾಟವಾದ ಪ್ರಾಮಿಸ್‌ ಟೂಥ್ ಪೆಸ್ಟ್ ಬ್ರಶ್‌ ಮಾಡುವುದನ್ನು ಮರೆತುಬಿಟ್ಟಿದೆ. 'ನನ್ನ ದೇಶದ ತೊಂದರೆಯಲ್ಲಿರುವ ರೈತರು ಮತ್ತು ನಿರುದ್ಯೋಗಿ ಯುವಕರ ಮುಖದಲ್ಲಿ ಮಂದಹಾಸವನ್ನು ತರಲಿಲ್ಲ, ನಿನ್ನೆ ಕರ್ನಾಟಕದ ಪರಿವರ್ತನಾ ಯಾತ್ರೆಯಲ್ಲಿ ಮಾರಾಟವಾದ ಪ್ರಾಮಿಸ್‌ ಟೂತ್ ಪೇಸ್ಟ್‌ ಮೇಲೆ ನಿಮಗೆ ನಂಬಿಕೆ ಇದೆಯೇ? ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ಅವರ ಈ ಟ್ವೀಟ್‌ ಅನ್ನು 3 ಸಾವಿರ ಜನ ಲೈಕ್ ಮಾಡಿದ್ದಾರೆ. 900ಕ್ಕೂ ಹೆಚ್ಚು ಜನ ಕಮೆಂಟ್ ಹಾಕಿದ್ದಾರೆ. ಇದರಲ್ಲಿ ಪರ ಮತ್ತು ವಿರೋಧದ ಕಮೆಂಟ್‌ಗಳು ಇವೆ.

ಪ್ರತಿಕ್ರಿಯಿಸಿ (+)