ಬುಧವಾರ, ಡಿಸೆಂಬರ್ 11, 2019
23 °C

ಗ್ರಾಮೀಣ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ.....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ.....

ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುವ ಜಿ.ವಿಜಯಕುಮಾರ ಅವರು ಈಗಾಗಲೇ ತಮ್ಮ ತಂದೆಯವರ ಜೊತೆಗೂಡಿ ಅಪಾರ ಅನುಭವ ಪಡೆದಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಕ್ಷೇತ್ರದ ಗ್ರಾಮಗಳ ಜನರ ಏಳಿಗೆಗೆ ಹಗಲಿರುಳು ಶ್ರಮಿಸಿದ್ದಾರೆ. ಪಾರ್ದಶಕ ಆಡಳಿತ ಜೊತೆಗೆ ಅಭಿವೃದ್ಧಿಪರ ಹಾಗೂ ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಶಾಸಕ ಜಿ.ರಾಮಕೃಷ್ಣರ ಹೆಗಲಿಗೆ ಹೆಗಲು ಕೊಟ್ಟು ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿಭಾಯಿಸಿದ್ದಾರೆ.

ಈ ಹಿಂದೆ 20 ವರ್ಷಗಳಲ್ಲಾಗದ ಕಾರ್ಯಗಳು ಶಾಸಕ ಜಿ.ರಾಮಕೃಷ್ಣರ ಅವಧಿಯಲ್ಲಾಗಿದ್ದು, ಶಾಸಕರ ಜೊತೆಗೂಡಿ ಅವರ ಸುಪುತ್ರ ವಿಜಯಕುಮಾರ ಪ್ರತಿಯೊಂದು ಗ್ರಾಮ, ತಾಂಡಾಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಅಗತ್ಯ ಯೋಜನೆ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು, ಶಾಸಕರ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕ್ಷೇತ್ರಕ್ಕೆ ಅಪಾರ ಪ್ರಮಾಣದ ಅನುದಾನ ಒದಗಿಸುವುದರ ಜೊತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಮುತುವರ್ಜಿವಹಿಸಿದ್ದು, ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯುವ ಮೂಲಕ ಜನಮಾಸದಲ್ಲಿ ಮನೆ ಮಾಡಿದ್ದಾರೆ.

ಪುನರ್ವಸತಿಗಳಿಗೆ ಪುನರುಜ್ಜಿವನ

ಕ್ಷೇತ್ರದಲ್ಲಿ ಎರಡು ಅಣೆಕಟ್ಟೆಗಳಿದ್ದು ಇದರಲ್ಲಿ ಗಂಡೋರಿ ನಾಲಾ ಆಣಕಟ್ಟೆಯಲ್ಲಿ ಮುಳುಗಡೆಯಾಗಿರುವ ಬೆಳಕೋಟಾ, ಧಮ್ಮೂರ ಹಾಗೂ ಬೆಣ್ಣೆತೋರಾ ಆಣೆಕಟ್ಟೆಯಲ್ಲಿ ಹೇರೂರ, ಯಕ್ಕಂಚಿ, ಹರಕಂಚಿ, ತೊಂಡಕಲ್‌, ಕನ್ನಡಗಿ, ಕಡಬೂರ, ಸಾವತಖೇಡ್‌, ಸಿರ್ಗಾಪುರ, ಅಂಕಲಗಾ, ಕುರಿಕೋಟಾ, ನಾಗೂರ ಗ್ರಾಮಗಳ ಪುನರ್ವಸತಿಗಳಿಗೆ ಮೂಲಸೌಕರ್ಯವಿಲ್ಲದೆ ನಲುಗಿ ಹೋಗಿದ್ದವು. ಅವುಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಶಾಸಕರು ಪುನರುಜ್ಜೀವನಗೊಳಿಸಿದ್ದಾರೆ.

ಜೊತೆಗೆ ನಾಗೂರ ಪುನರ್ವಸತಿಗೆ ಹೆಚ್ಚುವರಿ 16 ಎಕರೆ ಜಮೀನು ಹಾಗೂ ₹3.75 ಅನುದಾನ, ಅಂಕಲಗಾ ಪುನರ್ವಸತಿಗೆ 35 ಎಕರೆ ಹೆಚ್ಚುವರಿ ಜಮೀನು ₹2.25 ಕೋಟಿ ಅನುದಾನ, ಕುರಿಕೋಟಾ ಪುನರ್ವಸತಿಗೆ ₹8.50 ಕೋಟಿ ಅನುದಾನ ಒದಗಿಸಿ, ಎಲ್ಲರಿಗೂ ನಿವೇಶನ, ನೀರು, ರಸ್ತೆ, ಸಮುದಾಯ ಭವನ ಮತ್ತಿತರ ಮೂಲ ಸೌಕರ್ಯ ಒದಗಿಸಲಾಗಿದೆ.

ನೀರಾವರಿಗೆ ಒತ್ತು: ₹192 ಕೋಟಿ ಅನುದಾನ

ಶಾಸಕ ಜಿ. ರಾಮಕೃಷ್ಣರ ಹಿಂದಿನ ಅವಧಿಯಲ್ಲಿ ಕ್ಷೇತ್ರದಲ್ಲಿ ಬೆಣ್ಣೆ ತೋರಾ ಹಾಗೂ ಗಂಡೋರಿ ನಾಲ ಅಣೆಕಟ್ಟು ನಿರ್ಮಿಸಲಾಗಿದೆ. ಈಗ ಅವುಗಳಲ್ಲಿ ತುಂಬಿದ ಜಲಾಶಯದಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದವರು ಮುತುವರ್ಜಿ ವಹಿಸದ ಕಾರಣ ಗಂಡೋರಿ ನಾಲಾ ಕಾಲುವೆಗಳು ಕಾಮಗಾರಿ ಕಳಪೆಯಾಗಿದ್ದು, ಅವು ಅವಸಾನಗೊಂಡು ರೈತರ ಹೊಲಗಳಿಗೆ ನೀರು ತಲುಪಲೆ ಇಲ್ಲ.

ಮುಲ್ಲಾಮರಿ ಬಲದಂಡೆ ಕಾಲುವೆಗಳು ಸಹ ಇದೆ ಸ್ಥಿತಿಯಲ್ಲಿದ್ದವು. ಇದನ್ನು ಗಮನಿಸಿದ ಶಾಸಕರಾದ ಜಿ.ರಾಮಕೃಷ್ಣ ಹಾಗೂ ಅವರ ಪುತ್ರ ಜಿ.ಆರ್‌.ವಿಜಯಕುಮಾರ ಸೇರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಎಂ.ಬಿ. ಪಾಟೀಲರ ಮನವೊಲಿಸಿ ಗಂಡೋರಿ ನಾಲಾ ಕಾಲುವೆ ದುರಸ್ಥಿಗೆ ₹ 92ಕೋಟಿ, ಮುಲ್ಲಾಮರಿ ಕಾಲುವೆ ದುರಸ್ಥಿಗೆ ₹68 ಕೋಟಿ ಒದಗಿಸಲಾಯಿತು.

ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಾಣ

ಕ್ಷೇತ್ರದಲ್ಲಿ ನೇಕ ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಿಸಿ ನೀರಾವರಿ ಅನುಕೂಲ ಮಾಡಿಕೊಡುವುದರ ಜೊತೆಗೆ ಅಡ್ಡಲಾಗಿ ಹರಿಯುತ್ತಿರುವ ಹಳ್ಳಕ್ಕೆ ಸೇತುವೆ ನಿರ್ಮಿಸಿ ಹಳ್ಳಿಗಳಿಗೆ ಹಾಗೂ ರೈತರ ಜಮೀನುಗಳಿಗೆ ಸಂಪರ್ಕ ಒದಗಿಲಾಗಿದೆ. ಭೂಸಣಗಿ– ಮಹಾಗಾಂವ ಬ್ರೀಜ್‌ ಕಂ ಬ್ಯಾರೇಜ್‌ಗೆ ₹ 4 ಕೋಟಿ, ಮಹಾಗಾಂವ– ದಸ್ತಾಪುರ ₹1.50ಕೋಟಿ, ಸುಮಾರು ₹1ಕೋಟಿ ವೆಚ್ಚದಲ್ಲಿ, ನಾವದಗಿ ಸೊಂತ ಗ್ರಾಮದ ಹತ್ತಿರ ಎರಡು, ಕಲ್ಮೂಡ, ಸಣ್ಣೂರ, ಮರಗುತ್ತಿ, ತೊನಸಳ್ಳಿ ಮತ್ತಿತರ ಕಡೆಗಳಲ್ಲಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಿಸಲಾಗಿದೆ.

ಭವನಗಳ ನಿರ್ಮಾಣ

ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಅಂಬೇಡ್ಕರ್‌ ಸಮುದಾಯ ಭವನ. ಬಾಬು ಜಗಜೀವನರಾಂ ಭವನ, ಸೇವಾಲಾಲ ಭವನ, ಅಂಬಿಗರ ಚೌಡಯ್ಯ ಭವನ, ಕನಕ ಭವನ ಗಳನ್ನು ನಿರ್ಮಾಣಮಾಡಿ ಸಾರ್ವಜನಿಕರು ಸಭೆ ಸಮಾರಂಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.

ಧಮ್ಮೂರ ಗ್ರಾಮದಲ್ಲಿ ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಮ ಭವನ ನಿರ್ಮಾಣ, ಮಹಾಗಾಂವ ಅಂಬೇಡ್ಕರ್ ಸಮುದಾಯ ಭವನ, ಮುಸ್ಲಿಂ ಸಮುದಾಯ ಭವನ, ಕಮಲಾಪುರ, ಅವರಾದ (ಬಿ) ಗ್ರಾಮಗಳಲ್ಲಿ ತಲಾ ₹50 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣ

ಗ್ರಾಮ ವಿಕಾಸ ಯೋಜನೆ

ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರದ ಗ್ರಾಮ ವಿಕಾಸ ಯೋಜನೆಯಡಿ ಕ್ಷೇತ್ರದ 5ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ತಲಾ ₹75ಲಕ್ಷ ಹಣ ಮಂಜೂರು ಮಾಡಲಾಗಿದೆ. ಎಚ್‌ಕೆಆರ್‌ಡಿಬಿ ಯೋಜನೆಯಡಿ ಗ್ರಾಮ ವಿಕಾಸ ಯೋಜನೆಯಲ್ಲಿ ಲೇಂಗಟಿ, ಬೇಲೂರ (ಜೆ), ಕೆಸರಟಗಿ ಗ್ರಾಮಗಳಿಗೆ ತಲಾ ₹ 50ಲಕ್ಷ ಅನುದಾನ ಜೊತೆಗೆ ಕುರಿಕೋಟಾ, ಕಿಣ್ಣಿ ಸರಫೋಸ್‌, ನಂದೂರ (ಕೆ) ಗ್ರಾಮ ಗಳಿಗೆ ತಲಾ ₹ 1ಕೋಟಿ ಮಂಜೂರಾಗಿದೆ.

ರಕ್ಷಣೆ, ಆರೋಗ್ಯ ಸೇವೆ, ನೈರ್ಮಲ್ಯ

ಕಮಲಾಪುರ ಹಾಗೂ ಮಹಾಗಾಂವ ಪೊಲೀಸ್‌ ವಸತಿಗ್ರಹಗಳ ನಿರ್ಮಾಣ. ತಲಾ ₹20 ಲಕ್ಷ ವೆಚ್ಚದಲ್ಲಿ ಮಹಾಗಾಂವ, ವಿಕೆ ಸಲಗರ ಗ್ರಾಮಗಳಲ್ಲಿ ಆಸ್ಪತ್ರೆಯಲ್ಲಿ ನರ್ಸ್‌ ವಸತಿಗ್ರಹ ನಿರ್ಮಾಣ, ನಂದೂರ ಬಿ.ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ. ನರೋಣಾ ಗ್ರಾಮದಲ್ಲಿ ಎಎನ್‌ಎಮ್‌ ಕಟ್ಟಡ ನರ್ಸ್‌ ವಸತಿ ಕಟ್ಟಡ ನಿರ್ಮಾಣ ಮಾಡಲಾಗಿದೆ

ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆಯಿಂದ ₹30.19 ಕೋಟಿ ಅನುದಾನ, ಲೋಕೋಪಯೋಗಿ ಇಲಾಖೆಯಿಂದ ₹35.45 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಪಂಚಾಯತರಾಜ ಇಂಜಿನೀಯರಿಂಗ ಇಲಾಖೆಯಿಂದ ₹12.50 ಅನುದಾನದಲ್ಲಿ ಸಿಸಿ ರಸ್ತೆ, ಬಸವ ವಸತಿ ಯೋಜನೆಯಡಿ 2449 ಕುಟುಂಬಗಳಿಗೆ ಮನೆ ಒದಗಿಸಲಾಗಿದೆ.

ಆರ್‌ಎಂಎಸ್‌ಎ ಕಟ್ಟಡ ನಿರ್ಮಾಣ

ಕಮಲಾಪುರ, ಕಲಮೂಡ, ಅವರಾದ, ತಾವರಗೇರಾ, ಕಮಲಾನಗರ, ಚಿಂಚನಸೂರ, ಮರತೂರ, ಶಹಾಬಾದ್‌, ಶ್ರೀನಿವಾಸ ಸರಡಗಿ, ಮುದ್ದಡಗಾ, ಬೋದನ್‌ ಪ್ರೌಢ ಶಾಲೆಗಳಿಗೆ ಆರ್ಎಂಎಸ್‌ಎ ಯೊಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಗೊಬ್ಬರವಾಡಿ ಶಾಲೆಗೆ ನಾಲ್ಕು ಕೊಠಡಿ ಮಂಜೂರು ಮಾಡಲಾಗಿದೆ.

ಕಮಲಾಪುರ ಪದವಿ ಕಾಲೇಜಿಗೆ ಮೂಲಸೌಕರ್ಯಕ್ಕೆ ಅನುದಾನ, ಮಹಗಾಂವ ಪದವಿ ಪೂರ್ವ ಕಾಲೇಜಿಗೆ ಪೀಠೋಪಕರಣಕ್ಕೆ ₹5ಲಕ್ಷ, ಕೊಠಡಿ ಹಾಗೂ ಲ್ಯಾಬ್‌ಗೆ ₹15 ಲಕ್ಷ, ಪದವಿ ಕಾಲೇಜಿಗೆ ₹ 9 ಲಕ್ಷ ಅನುದಾನ, ಪ್ರಾಥಮಿಕ ಶಾಲೆ ತಡೆಗೋಡೆ ₹2.25 ಲಕ್ಷ, ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಒದಗಿಸಿ ಅನೇಕ ಗ್ರಾಮಗಳ ಶಾಲೆಗಳಿಗೆ ಹೆಚ್ಚುವರಿ ಕೋಣೆ, ಶೌಚಾಲಯ, ಪೀಠೋಪಕರಣಗಳನ್ನು ಒದಗಿಸಿ ಶೈಕ್ಷಣಿಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಮುಖ್ಯ ಮಂತ್ರಿ ಆದರ್ಶಗ್ರಾಮ

ಶ್ರೀನಿವಾಸ ಸರಡಗಿ, ಕಮಲಾಪುರ ಗ್ರಾಮಗಳಿಗೆ ತಲಾ ₹ 50ಲಕ್ಷ ಒದಗಿಸಲಾಗಿದೆ.

ಜೊತಗೆ ಕೌನಳ್ಳಿ, ಮರಮಂಚಿ, ಮಳಸಾಪುರ, ನಂದೂರ (ಬಿ), ಮಡಕಿ, ಕುದಮೂಡ, ವರನಾಳ, ಕಾಳನೂರ ಗ್ರಾಮಗಳಿಗೆ ಮುಖ್ಯ ಮಂತ್ರಿ ಆದರ್ಶಗ್ರಾಮ ಯೋಜನೆಯಡಿ ₹ 45 ಲಕ್ಷ ಒದಗಿಸಲಾಗಿದೆ.

ನಗರೋತ್ಥಾನ ಯೋಜನೆಯಡಿ ಶಹಾಬಾದ ನಗರ ಅಭಿವೃದ್ಧಿಗೆ ₹ 39 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಬಬಲಾದ ಗ್ರಾಮ ಪ್ರವಾಸಿ ತಾಣವನ್ನಾಗಿಸಲು ನಾಲ್ಕು ಕಡೆಯಿಂದ ರಸ್ತೆ ಸಂಪರ್ಕ ಕಲ್ಪಿಸಿ ₹50 ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)