ಭಾನುವಾರ, ಡಿಸೆಂಬರ್ 8, 2019
25 °C

ಭಾವೈಕ್ಯ ಕೇಂದ್ರ ಭೋಜಲಿಂಗೇಶ್ವರ ಮಠ

ಅವಿನಾಶ್ ಎಸ್‌. ಬೋರಂಚಿ Updated:

ಅಕ್ಷರ ಗಾತ್ರ : | |

ಭಾವೈಕ್ಯ ಕೇಂದ್ರ ಭೋಜಲಿಂಗೇಶ್ವರ ಮಠ

ಸೇಡಂ: ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿರುವ ಭೋಜಲಿಂಗೇಶ್ವರ ಮಠ ಧಾರ್ಮಿಕ ಭಾವೈಕ್ಯತೆಯ ತಾಣ ವಾಗಿ ಜನ ಸೇವೆಯಲ್ಲಿ ನಿರತವಾಗಿದೆ. ಕಳೆದ 20 ವರ್ಷಗಳಿಂದ ಪೂಜ್ಯ ಪ್ರಕಾಶ ತಾತಾನವರ ನೇತೃತ್ವದಲ್ಲಿ ಜನ ಸೇವೆಯಲ್ಲಿರುವ ಮಠ ವಿಶ್ವಾಸಕ್ಕೆ ಪಾತ್ರವಾಗಿದೆ. ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೊತ್ತು ಮಠಕ್ಕೆ ಬರುವ ಭಕ್ತರ ಸಮಸ್ಯೆ ನಿರ್ಮೂಲನೆ ಮಾಡಿ ಜನರ ಪಾಲಿನ ‘ವೈದ್ಯ’ ರೆಂದೆ ಪ್ರಕಾಶ ತಾತಾನವರು ಪ್ರಖ್ಯಾತಿ ಪಡೆದಿದ್ದಾರೆ.

‘ಸಾಂಪ್ರದಾಯಿಕ ಕ್ರೀಯಾಚಟು ವಟಿಕೆ ಹಾಗೂ ಧಾರ್ಮಿಕ ತತ್ವಗಳೊಂದಿಗೆ ಪ್ರಕಾಶ ತಾತಾನವರು  ಸಮಾಜಮುಖಿ ಕಾರ್ಯ ಮಾಡುತಿದ್ದಾರೆ. ಕೇವಲ ಧಾರ್ಮಿಕ ಕೇಂದ್ರಕ್ಕೆ ಮಠವನ್ನು ಸೀಮಿತಗೊಳಿಸಿದೇ, ಅನೇಕ ಸಾಮಾ ಜಿಕ ಕಾರ್ಯಚಟುವಟಿಕೆಗಳನ್ನು ಮಾಡಿದ್ದಾರೆ. ಲಕ್ಷದೀಪೋತ್ಸವ ಕಾರ್ಯಕ್ರಮ, 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ, 1001 ರೈತರನ್ನು ಸೇರಿಸಿ ‘ರೈತ ಮಹೋತ್ಸವ ಕಾರ್ಯಕ್ರಮ’ ಮಾಡಲಾಗಿದೆ.

’ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರತಿವರ್ಷದ ಜಾತ್ರಾ ಮಹೋತ್ಸವದಲ್ಲಿ ಸನ್ಮಾನಿಸಲಾ ಗುತ್ತಿದೆ. ದಸರಾ ಹಬ್ಬದಲ್ಲಿ ಮಹಿಳೆ ಯರಿಗೆ ಉಡಿ ತುಂಬುವ ಕಾರ್ಯ ಮಾಡುತ್ತಿದೆ’ ಎಂದು ಶಿವಾರೆಡ್ಡಿ ಗೌಡನಹಳ್ಳಿ ತಿಳಿಸುತ್ತಾರೆ.

‘ಮಠವು ದ್ವಿಶಾಖಾ ಮಠವನ್ನು ಹೊಂದಿದ್ದು, ಸೇಡಂ ತಾಲ್ಲೂಕಿನ ಗೌಡನಹಳ್ಳಿಯ ‘ಭೋಜಲಿಂಗೇಶ್ವರ ಮಠ’ ಪ್ರತಿ ಗುರುವಾರ ಮತ್ತು ಅಮಾವಾಸ್ಯೆಯ, ಚಿಂಚೋಳಿ ತಾಲ್ಲೂಕಿನ ಗೌಡನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ‘ಗುರುಸೇವಾ ಆಶ್ರಮ’ ಕೇಂದ್ರದಲ್ಲಿ ಪ್ರತಿ ಭಾನುವಾರ ಮತ್ತು ಹುಣ್ಣಿಮೆಯಂದು ಪ್ರಕಾಶ ತಾತಾ ಭಕ್ತರಿಗೆ ದರ್ಶನ ನೀಡುತ್ತಾರೆ’ ಎಂದು ಮಹಿಪಾಲ ದೊಡ್ಡಮನಿ ಹೇಳುತ್ತಾರೆ. ಉಭಯ ತಾಲ್ಲೂಕುಗಳಲ್ಲಿ ಒಂದೇ ಹೆಸರಿನ (ಗೌಡನಹಳ್ಳಿ) ಎರಡು ಗ್ರಾಮದಲ್ಲಿ ಮಠ ಹೊಂದಿದ್ದು, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಭಕ್ತರಿಗೆ ದರ್ಶನ ನೀಡುವುದು ಮಠದ ವಿಶೇಷತೆಯಾಗಿದೆ.

ಧಾರ್ಮಿಕ ಕ್ರೀಯಾ ಚಟುವಟಿಕೆಯ ಜೊತೆಗೆ ಪೂಜ್ಯ ಪ್ರಕಾಶ ತಾತಾನವರು, ಮಠದಲ್ಲಿ ಹುನುಮಾನ ದೇವಸ್ಥಾನ, ದಾವಲ ಮಲ್ಲಿಕ್ ದರ್ಗಾ, ಅಂಭಾ ಭವಾನಿ ದೇವಾಲಯ, ಗಣೇಶ ದೇವಸ್ಥಾನ, ನವಗ್ರಹ, ದತ್ತಾತ್ರೆಯ ಸೇರಿದಂತೆ ಅನೇಕ ದೇವಾಲಯಗಳನ್ನು ನಿರ್ಮಿಸಿ ಜಾತ್ಯಾತೀತತೆಯ ಮಠವನ್ನಾಗಿ ಪರಿವರ್ತಿಸಿದ್ದಾರೆ. ದಿನನಿತ್ಯ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಮಠದಲ್ಲಿ ಅನೇಕ ದನ ಕರುಗಳನ್ನು, ಜಿಂಕೆಗಳನ್ನು ಹಾಗೂ ಪಾರಿವಾರಗಳನ್ನು ಸಾಕಿದ್ದಾರೆ. ಅವುಗಳಿಗೆ ನಿತ್ಯ ಆಹಾರ ಹಾಕಿ ದೈನಿಕ ಕಾರ್ಯಚಟುವಟಿಕೆಗಳಿಗೆ ಮುಂದಾಗುತ್ತಾರೆ.

* * 

ಗ್ರಾಮೀಣ ಭಾಗದಲ್ಲಿದ್ದು ನಿತ್ಯ ಜನರ ಸೇವೆ ಮಾಡುವ ಪ್ರಕಾಶ ತಾತಾನವರ ಸೇವೆ ಅಮೂಲ್ಯವಾಗಿದೆ. ಅವರಿಂದ ಜನರಿಗೆ ಅನೇಕ ಕಷ್ಟಗಳು ದೂರವಾಗಿವೆ.

ಶಿವಾರೆಡ್ಡಿ ಗೌಡನಹಳ್ಳಿ, ಮುಖಂಡ

ಪ್ರತಿಕ್ರಿಯಿಸಿ (+)