ಭಾನುವಾರ, ಡಿಸೆಂಬರ್ 8, 2019
24 °C

ಪದ್ಮಾವತ್‌: ಎರಡನೇ ವಾರಾಂತ್ಯಕ್ಕೆ ₹ 212 ಕೋಟಿ ಗಳಿಕೆ

Published:
Updated:
ಪದ್ಮಾವತ್‌: ಎರಡನೇ ವಾರಾಂತ್ಯಕ್ಕೆ ₹ 212 ಕೋಟಿ ಗಳಿಕೆ

ನವದೆಹಲಿ: ಹಲವು ವಿವಾದದ ಬಳಿಕ ತೆರೆಕಂಡ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರ ಎರಡನೇ ವಾರಾಂತ್ಯಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ₹ 212 ಕೋಟಿ ಗಳಿಸಿ, ಮುನ್ನಡೆಯುತ್ತಿದೆ.

ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರ ಕೆಲವು ರಾಜ್ಯಗಳಲ್ಲಿ ತೆರೆ ಕಾಣದಿದ್ದರೂ ಎರಡನೇ ವಾರಾಂತ್ಯದ ದಿನಗಳಲ್ಲಿ ₹ 45 ಕೋಟಿ ಗಳಿಸಿದೆ.

ಎರಡನೇ ವಾರದಲ್ಲಿ ಶುಕ್ರವಾರ ₹ 10 ಕೋಟಿ, ಶನಿವಾರ 16 ಕೋಟಿ, ಭಾನುವಾರ 20 ಕೋಟಿ ಸೇರಿದಂತೆ ಒಟ್ಟು ₹ 212.50 ಕೋಟಿ ಗಳಿಕೆ ಮಾಡಿದೆ.

‘ಪದ್ಮಾವತ್’ ಚಿತ್ರ ಕಳೆದ ಜ.25ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು.

* ಇವನ್ನೂ ಓದಿ...

‘ಪದ್ಮಾವತ್‌’ ನನ್ನ ಪಾಲಿಗೆ ಸಂಭ್ರಮವಾಗಿತ್ತು– ದೀಪಿಕಾ

ಪ್ರತಿಕ್ರಿಯಿಸಿ (+)