‘ರೋಗಮುಕ್ತ ಜೀವನಕ್ಕೆ ಯೋಗ ಮದ್ದು’

7

‘ರೋಗಮುಕ್ತ ಜೀವನಕ್ಕೆ ಯೋಗ ಮದ್ದು’

Published:
Updated:

ಹುಮನಾಬಾದ್: ‘ರೋಗ ಮುಕ್ತ ಜೀವನಕ್ಕೆ ಯೋಗವೇ ಮದ್ದು’ ಎಂದು ಹಿರಿಯ ಸಾಹಿತಿ ಬಿ.ಎಸ್‌.ಖೂಬಾ ಹೇಳಿದರು. ತಾಲ್ಲೂಕಿನ ಗಡವಂತಿ ಗ್ರಾಮದಲ್ಲಿ ಮುಗ್ಧ ಸಂಗಯ್ಯ ಗವಿ ಅಭಿವೃದ್ದಿ ಸಮಿತಿ ಭಾನುವಾರ ಏರ್ಪಡಿಸಿದ್ದ 15ದಿನಗಳ ಕಾಲದ ಉಚಿತ ಯೋಗಾ ತರಬೇತಿ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶಿವಪ್ಪ ಸಾವಳಿ ಮಾತನಾಡಿ, ‘ಗವಿ ಅಭಿವದ್ದಿ ಸಂಘ ಆಯೋಜಿಸಿರುವ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಬಸವಣಪ್ಪ ನೂಲಾ ಮಾತನಾಡಿ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವುದರ ಜತೆಯಲ್ಲಿ ಹೊರಾಂಗಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಯೋಗ ತರಬೇತಿದಾರ ಆನಂದ ಎಸ್‌, ರೈತ ಮುಖಂಡ ಸಿದ್ದಣ್ಣ ಭೂಶಟ್ಟಿ, ವೀರಯ್ಯ ಮಠಪತಿ, ಶಶಿಕಾಂತ ಗಂಗಸಿರಿ, ಡಾ.ಪ್ರಥ್ವಿರಾಜ ನೂಲಾ, ವಿನೋದ ಹೆಮ್ಮಣ್ಣಿ, ಸಂತೋಷ ಭೂಶೆಟ್ಟಿ, ಸಂಗಮೆಶ ಗಂಗಸಿರಿ, ಶ್ರೀಕಾಂತ ಪಾಟೀಲ ವೇದಿಕೆಯಲ್ಲಿ ಇದ್ದರು. ಶಂಕರ ಹಿಪ್ಪಳಗಿ, ದೀಪಕ ಜನ್ನಾ ಮೊದಲಾದವರು ಇದ್ದರು. ವಿನೂತಾ ಸ್ವಾಗತಿಸಿದರು. ಭಾಗ್ಯಶ್ರಿ ಹಿಪ್ಪಳಗಿ ನಿರೂಪಿಸಿದರು. ಬಸವರಾಜ ಬೋರಾಳೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry