ಗೂಳಿಹಟ್ಟಿ ಶೇಖರ್ ಬಿಜೆಪಿ ಸೇರ್ಪಡೆ: ಸಂಭ್ರಮ

7

ಗೂಳಿಹಟ್ಟಿ ಶೇಖರ್ ಬಿಜೆಪಿ ಸೇರ್ಪಡೆ: ಸಂಭ್ರಮ

Published:
Updated:

ಶ್ರೀರಾಂಪುರ: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಶನಿವಾರ ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಶ್ರೀರಾಂಪುರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಗೂಳಿಹಟ್ಟಿ ಅಭಿಮಾನಿಗಳು ಪಟಾಕಿ ಸಿಡಿಸಿ, ಬೈಕ್ ರ‍್ಯಾಲಿ ನಡೆಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಗೂಳಿಹಟ್ಟಿ ಶೇಖರ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿರುವುದು ಬಿಜೆಪಿ ಹಾಗೂ ಗೂಳಿಹಟ್ಟಿ ಬೆಂಬಲಿಗರಲ್ಲಿ  ಚೈತನ್ಯ ಬಂದಂತಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆಯ ಲೆಕ್ಕಾಚಾರದಲ್ಲಿ ಗೂಳಿಹಟ್ಟಿ ಶೇಖರ್‌ಗೆ ಬಿಜೆಪಿ ಟಿಕೆಟ್ ಲಭಿಸುವ ಸಾಧ್ಯತೆ ಇದೆ

ಕಳೆದ ಚುನಾವಣೆ ಫಲಿತಾಂಶದ ನಂತರ ನೇಪತ್ಯಕ್ಕೆ ಸರಿದಿದ್ದ ಗೂಳಿಹಟ್ಟಿ ಆನಂತರ ತಾಲ್ಲೂಕಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಪುನಃ ರಂಗಪ್ರವೇಶದ ಸುಳಿವು ನೀಡಿ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದ್ದರು. ಈಗ ಚುನಾವಣೆ ಸನಿಹವಾಗುತ್ತಿದ್ದಂತೆ ಬಿಜೆಪಿ ಸೇರ್ಪಡೆಯಾಗಿರುವುದು ತಾಲ್ಲೂಕಿನ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry