ಶುಕ್ರವಾರ, ಡಿಸೆಂಬರ್ 6, 2019
26 °C

ಸ್ಟೌಗಳಲ್ಲಿ ಅಡಗಿಸಿ ಸಾಗಿಸುತ್ತಿದ್ದ ₹ 1.43 ಕೋಟಿ ಮೌಲ್ಯದ ಚಿನ್ನ ಡಿಆರ್‌ಐ ವಶಕ್ಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸ್ಟೌಗಳಲ್ಲಿ ಅಡಗಿಸಿ ಸಾಗಿಸುತ್ತಿದ್ದ ₹ 1.43 ಕೋಟಿ ಮೌಲ್ಯದ ಚಿನ್ನ ಡಿಆರ್‌ಐ ವಶಕ್ಕೆ

ನೆಲ್ಲೂರು: ಪ್ರಯಾಣಿಕರೊಬ್ಬರು ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4.658 ಕೆ.ಜಿ. ಬಂಗಾರವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‍ಐ) ಅಧಿಕಾರಿಗಳು ಆಂಧ್ರಪ್ರದೇಶ ನೆಲ್ಲೂರಿನ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಚಿನ್ನದೊಂದಿಗೆ ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ ಭಾನುವಾರ ಈ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ₹ 1,43,00,060 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾರೀ ಮೊತ್ತದ ಚಿನ್ನವನ್ನು ಎರಡು ಸ್ಟೌಗಳಲ್ಲಿ ಅಡಗಿಸಿ ಇಡಲಾಗಿತ್ತು ಎಂದು ವಿವರ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)