ಗುರುವಾರ , ಜೂನ್ 4, 2020
27 °C

ಬದಲಾವಣೆಯ ಈ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಲಾವಣೆಯ ಈ ದಾರಿ

ಪ್ರಕೃತಿ ರಕ್ಷಣೆ ಎನ್ನುವುದು ಕೇವಲ ಮಾತಾಗಿ ಉಳಿಯುತ್ತಿದೆ. ಅದನ್ನು ಜಾರಿಗೆ ತರದೆ ಒಂದಲ್ಲ ಒಂದು ರೀತಿಯಿಂದ ವಾತಾವರಣವನ್ನು ನಾವು ಹಾಳು ಮಾಡುತ್ತಲೇ ಇದ್ದೇವೆ. ಬದಲಾಗುತ್ತಿರುವ ಹವಾಮಾನದ ಕುರುಹನ್ನು ಪ್ರಕೃತಿ ಹೊರಚೆಲ್ಲಿದ್ದು ಹೇಗೆಲ್ಲಾ ಗೊತ್ತೇ?

* ಬಟಾಬಯಲು ಸಹರಾ ಮರುಭೂಮಿ. ಆದರೆ ಈ ವರ್ಷ ಇಲ್ಲಿ ಹಿಮಪಾತ ಉಂಟಾಗಿದೆ. ಪ್ರಪಂಚದ ಅತಿ ಉಷ್ಣ ಪ್ರದೇಶ ಎಂದೇ ಹೆಸರು ಗಳಿಸಿರುವ ಇಲ್ಲಿ ಹಿಮಪಾತ ಆಗಿದೆ ಎಂದರೆ ಹವಾಮಾನ ಬದಲಾವಣೆಯ ಸ್ಪಷ್ಟ ಕಲ್ಪನೆ ಸಿಗದಿರುತ್ತದೆಯೇ.

* ಹವಾಮಾನ ಬದಲಾವಣೆಯ ನೇರ ಪರಿಣಾಮ ಅನುಭವಿಸಿದ್ದು ಆಸ್ಟ್ರೇಲಿಯಾದಲ್ಲಿರುವ ಆಮೆಗಳು. ಹೊರಗಿನ ವಾತಾವರಣದ ಉಷ್ಣತೆಗನುಗುಣವಾಗಿ ಆಮೆಗಳು ಗಂಡು ಇಲ್ಲವೇ ಹೆಣ್ಣಾಗುತ್ತವೆ. ಸದ್ಯ ಆಸ್ಟ್ರೇಲಿಯಾದಲ್ಲಿನ ವಿಪರೀತ ಉಷ್ಣದಿಂದಾಗಿ ಶೇ 99ರಷ್ಟು ಆಮೆಗಳು ಹೆಣ್ಣು.

* ಆಸ್ಟ್ರೇಲಿಯಾದಲ್ಲಿ ಈಗ ಬೇಸಿಗೆ ಕಾಲ. ಅತಿ ಹೆಚ್ಚಿನ ಉಷ್ಣಾಂಶ (117ಡಿಗ್ರಿ ಫ್ಯಾರನ್‌ಹೀಟ್‌) ಇಲ್ಲಿ ದಾಖಲಾಗಿದೆ. ಅಲ್ಲಿಯ ಶಾಖಕ್ಕೆ ಬಾವಲಿಗಳು ಸತ್ತು ಬೀಳುತ್ತಿವೆ. ಇತ್ತೀಚೆಗೆ 400 ಬಾವಲಿ ಶಾಖದಿಂದ ಸತ್ತಿವೆ ಎಂದು ವರದಿ ಮಾಡಲಾಗಿತ್ತು. ಅಲ್ಲದೆ ರಸ್ತೆಗೆ ಹಾಕಲಾದ ಡಾಂಬರುಗಳೂ ಕರಗುತ್ತಿವೆಯಂತೆ.

* ಅಮೆರಿಕದಲ್ಲಿಯೂ ವಿಪರೀತ ಶೀತ ದಾಖಲಾಗಿದೆ. ಶಾರ್ಕ್‌ ಮೀನುಗಳು ಚಳಿಗೆ ಹೆಪ್ಪುಗಟ್ಟಿ ಜೀವ ಕಳೆದುಕೊಳ್ಳುತ್ತಿವೆ. ಮರದ ಮೇಲೆ ವಾಸಿಸುವ ಉಡಗಳೂ (ಇಗ್ವಾನಾ) ಹೆಪ್ಪುಗಟ್ಟಿ ಕೆಳಗೆ ಉದುರುತ್ತಿವೆ.

* ಸಮುದ್ರ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫೆಸಿಫಿಕ್‌ ಸಾಗರದಲ್ಲಿದ್ದ ಎಂಟು ಮಹಾದ್ವೀಪಗಳು ಕಣ್ಮರೆಯಾಗಿವೆ.

* ಒರಟಾದ ಧ್ರುವೀಯ ಮರುಭೂಮಿ ಎಂದೇ ಹೇಳಲಾಗುತ್ತಿದ್ದ ಅಟಕಾಮಾ ಮರುಭೂಮಿಯಲ್ಲಿ ವಿಪರೀತ ಮಳೆಯಾಗಿದ್ದು, ಹೂವುಗಳು ಅರಳಿ ನಿಂತಿವೆ. ದಶಕಗಳಲ್ಲಿ ಇಲ್ಲಿ ಹೂಬಿಟ್ಟ ದಾಖಲೆಯೇ ಇರಲಿಲ್ಲ.

* ಉಷ್ಣಾಂಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಕೊವಾ ಗಿಡಗಳು ಚೆನ್ನಾಗಿ ಬೆಳೆಯುತ್ತಿಲ್ಲ. ಚಾಕೊಲೆಟ್‌ ತಯಾರಿಕಾ ಕಂಪೆನಿಗಳಿಗೆ ಕೊಕೊವಾ ಸಿಗುತ್ತಿಲ್ಲ. 2050ರ ಹೊತ್ತಿಗೆ ಚಾಕೊಲೇಟ್‌ ನೋಡಲು ಸಿಗುವುದಿಲ್ಲ.

* ಯುರೋಪ್‌ ದೇಶಗಳಲ್ಲಿ ಎಂದಿಗಿಂತಲೂ ವೈನ್‌ ಉತ್ಪನ್ನ ಕಡಿಮೆ ಆಗಿದೆ. ಅತಿಯಾದ ಚಳಿಯಿಂದಾಗಿ ವೈನ್‌ ಅನ್ನು ಹೆಚ್ಚು ಉತ್ಪಾದಿಸುವ ಇಟಲಿ, ಸ್ಪೇನ್‌, ಜರ್ಮನಿ, ಫ್ರಾನ್ಸ್‌ಗಳಲ್ಲಿ ಉತ್ಪಾದನೆಯೇ ಕಡಿಮೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.