ಬುಧವಾರ, ಡಿಸೆಂಬರ್ 11, 2019
16 °C

ವಿಶ್ವ ವಿಜೇತರಿಗೆ ಅದ್ದೂರಿ ಸ್ವಾಗತ

Published:
Updated:
ವಿಶ್ವ ವಿಜೇತರಿಗೆ ಅದ್ದೂರಿ ಸ್ವಾಗತ

ಮುಂಬೈ: ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದ ಭಾರತ ತಂಡದವರು ಸೋಮವಾರ ತವರಿಗೆ ಬಂದರು.

ಮಧ್ಯಾಹ್ನ 3.30ರ ಸುಮಾರಿಗೆ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪೃಥ್ವಿ ಶಾ ಬಳಗದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಮುಂಬೈ ಕ್ರಿಕೆಟ್‌ ಸಂಸ್ಥೆಯ (ಎಂಸಿಎ) ಅಧಿಕಾರಿಗಳು, ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ನಿಲ್ದಾಣದ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

ಕರ್ನಾಟಕದ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಭಾರತ ತಂಡ ಜೂನಿಯರ್‌ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿತ್ತು.

ಫೈನಲ್‌ನಲ್ಲಿ ಪೃಥ್ವಿ ಬಳಗ 8 ವಿಕೆಟ್‌ಗಳಿಂದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ತಂಡ ಈ ಬಾರಿಯ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಎದುರಾಳಿಗಳನ್ನು ಆಲೌಟ್‌ ಮಾಡಿದ ಸಾಧನೆಯನ್ನೂ ತನ್ನದಾಗಿಸಿಕೊಂಡಿತ್ತು.

* ಇವನ್ನೂ ಓದಿ...

ಯುವಪಡೆಗೆ ಕ್ರಿಕೆಟ್‌ ಕಿರೀಟ 

19 ವರ್ಷದೊಳಗಿನವರ ವಿಶ್ವಕಪ್ ಗೆಲುವಿನ ಹಿಂದೆ ಕರ್ನಾಟಕದ ರಾಹುಲ್‌ ದ್ರಾವಿಡ್‌ ಸೇವೆ ಅನನ್ಯ: ಮೋದಿ ಪ್ರಶಂಸೆ

ಪ್ರತಿಕ್ರಿಯಿಸಿ (+)