ಸೋಮವಾರ, ಡಿಸೆಂಬರ್ 9, 2019
21 °C

‘ಸಲ್ಲೂ ಬಗ್ಗೆ ಯಾಕೆ ಮಾತನಾಡಲಿ?’

Published:
Updated:
‘ಸಲ್ಲೂ ಬಗ್ಗೆ ಯಾಕೆ ಮಾತನಾಡಲಿ?’

ಸಲ್ಮಾನ್‌ ಖಾನ್‌ರ ಖಾಸಾ ದೋಸ್ತ್‌ ಎಂದೇ ಗುರುತಿಸಿಕೊಂಡಿರುವ ಸುಂದರಿ ಯೂಲಿಯಾ ವಂತೂರ್‌, ತಮ್ಮಿಬ್ಬರ ಕುರಿತ ಗಾಸಿಪ್‌ಗಳ ಬಗ್ಗೆ ಕೊನೆಗೂ ಬಾಯಿಬಿಟ್ಟಿದ್ದಾರೆ. ‘ಸಲ್ಮಾನ್‌ ಬಗೆಗಿನ ಯಾವುದೇ ಮಾತುಗಳಿಗೂ ನಾನು ಪ್ರತಿಕ್ರಿಯಿಸುವುದಿಲ್ಲ. ಯಾಕೆಂದರೆ ಅದು ನನ್ನ ಖಾಸಗಿ ಬದುಕು’ ಎಂದು ಕಡ್ಡಿಮುರಿದಂತೆ ಪ್ರತಿಕ್ರಿಯಿಸಿದ್ದಾರೆ ಯೂಲಿಯಾ.

ಸೂಪರ್‌ ಸ್ಟಾರ್‌ ಜೊತೆ ರೊಮ್ಯಾಂಟಿಕ್‌ ಆಗಿ ಫೋಟೊಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಗಟ್ಟಿಗಿತ್ತಿ ಈಕೆ. ಸಲ್ಮಾನ್‌ ಭಾಗಿಯಾಗುವ ಖಾಸಗಿ ಸಮಾರಂಭಗಳಲ್ಲಿಯೂ ಈಕೆ ಇದ್ದೇ ಇರುತ್ತಾರೆ. ಅಷ್ಟೇ ಯಾಕೆ? ಸಲ್ಲೂ ಜೊತೆ ಕೌಟುಂಬಿಕ ಪ್ರವಾಸಕ್ಕೂ ಹೋಗುತ್ತಿರುತ್ತಾರೆ. ಇಷ್ಟೆಲ್ಲಾ ಇರುವಾಗ ತಮ್ಮ ಸಂಬಂಧದ ಬಗ್ಗೆ ಬಾಯಿಬಿಟ್ಟು ಹೇಳಲು ಈಕೆ ತಯಾರಿಲ್ಲ!

‘ನನ್ನ ಖಾಸಗಿ ಬದುಕಿನ ಬಗ್ಗೆ ನಾನು ರಹಸ್ಯ ಕಾಪಾಡಲೇಬೇಕು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ, ವೃತ್ತಿ ಕ್ಷೇತ್ರದಲ್ಲಿ ನಮ್ಮನ್ನು, ನಮ್ಮ ಬದುಕನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಹಾಗಾಗಿ ಖಾಸಗಿ ಬದುಕಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಕಾದ ಅಗತ್ಯವಿಲ್ಲ. ಅದಕ್ಕಾಗಿ ನಾನು ಏನೂ ಹೇಳಲು ಇಚ್ಛಿಸುವುದಿಲ್ಲ. ಆದರೂ ನಮ್ಮಿಬ್ಬರ ಬಗ್ಗೆ ಜನ ಮಾತನಾಡುತ್ತಲೇ ಇರುತ್ತಾರೆ. ಅದನ್ನು ನಾನು ತಡೆಯಲಾಗದು’ ಎಂದು ಯೂಲಿಯಾ ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ.

‘ರೊಮೇನಿಯಾದಲ್ಲಿಯೂ ಇಂತಹ ಗಾಸಿಪ್‌ಗಳು ಬರುತ್ತವೆ. ಆದರೆ ಭಾರತದಲ್ಲಿ ಇರುವ ನಾನು ಇಲ್ಲಿ ನನ್ನ ಮತ್ತು ಸಲ್ಮಾನ್‌ ಬಗ್ಗೆ ಕೇಳಿಬರುತ್ತಿರುವ ಗಾಸಿಪ್‌ ಬಗ್ಗೆ ತಲೆಕೆಡಿಸಿಕೊಳ್ಳದೇ ಬದುಕುವುದನ್ನು ರೂಢಿಸಿಕೊಂಡಿದ್ದೇನೆ. ಇಲ್ಲದಿದ್ದರೆ ಅವು ನನ್ನನ್ನು ಕಾಡುವುದು ಖಚಿತ’ ಎಂದು ಯೂಲಿಯಾ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)