ಶುಕ್ರವಾರ, ಡಿಸೆಂಬರ್ 13, 2019
27 °C

ಮೋದಿ‌ ಭಾಷಣ ಪ್ರಧಾನಿ ಹುದ್ದೆಗೆ ಘನತೆ ತರುವಂತಿರಲಿಲ್ಲ; ಅವರು ಕರ್ನಾಟಕಕ್ಕೆ ಅಗೌರವ ಉಂಟುಮಾಡಿದ್ದಾರೆ: ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ‌ ಭಾಷಣ ಪ್ರಧಾನಿ ಹುದ್ದೆಗೆ ಘನತೆ ತರುವಂತಿರಲಿಲ್ಲ; ಅವರು ಕರ್ನಾಟಕಕ್ಕೆ ಅಗೌರವ ಉಂಟುಮಾಡಿದ್ದಾರೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವಿಟರ್‌ ಸಮರ ಮುಂದುವರೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿ ಅವರು ಕರ್ನಾಟಕಕ್ಕೆ ಅಗೌರವ ಉಂಟು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ‌ ಭಾಷಣ ಪ್ರಧಾನಿ ಹುದ್ದೆಯಲ್ಲಿರುವವರು ಮಾಡುವ ಭಾಷಣದಂತೆ ಇರಲಿಲ್ಲ. ಅವರು ಆಡಿದ ಮಾತುಗಳು ಅವರ ಹುದ್ದೆಗೆ ಘನತೆ ತರುವಂತೆ ಇರಲಿಲ್ಲ. ಅವರು ಕರ್ನಾಟಕಕ್ಕೆ ಅಗೌರವ ಉಂಟುಮಾಡಿದ್ದಾರೆ’ ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅನುದಾನದ ಅಂಕಿ ಸಂಖ್ಯೆಗಳನ್ನು ಜನರ ಮುಂದೆ ಲೆಕ್ಕ ಒಪ್ಪಿಸಿದ್ದರು. ಭಾಷಣದುದ್ದಕ್ಕೂ ಕಾಂಗ್ರೆಸ್‌ನ ಲೋಪಗಳನ್ನು ಎತ್ತಿ ತೋರಿಸಿದ್ದರು. 

ಪ್ರತಿಕ್ರಿಯಿಸಿ (+)