ಬುಧವಾರ, ಡಿಸೆಂಬರ್ 11, 2019
26 °C

ಪ್ರಧಾನಿ ವಿರುದ್ಧ ರಮ್ಯಾ ಟ್ವೀಟ್‌ಗೆ ನಟ ಜಗ್ಗೇಶ್ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ವಿರುದ್ಧ ರಮ್ಯಾ ಟ್ವೀಟ್‌ಗೆ ನಟ ಜಗ್ಗೇಶ್ ಆಕ್ರೋಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪರಿವರ್ತನಾ ಯಾತ್ರೆ ವೇಳೆ ಉಲ್ಲೇಖಿಸಿದ್ದ ‘ಟಾಪ್‌(TOP)’ ಹೇಳಿಕೆ ಬಗ್ಗೆ ನಟಿ ರಮ್ಯಾ ಮಾಡಿರುವ ಟೀಕೆಗೆ ನಟ ಜಗ್ಗೇಶ್ ಟ್ವಿಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರಮ್ಯಾ ಅವರನ್ನು ಉದ್ದೇಶಿಸಿ ಜಗ್ಗೇಶ್, ‘ಯಾರು ಈಕೆ? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ!’ ಎಂದು ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ಇಷ್ಟೇ ಅಲ್ಲದೆ, ‘ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ!’ ಎಂದೂ ರಮ್ಯಾ ಕುರಿತಾಗಿ ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.

ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಮೋದಿ, ‘ನಮ್ಮ ಸರ್ಕಾರ ತರಕಾರಿ ಬೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅದರಲ್ಲೂ ‘ಟಿಓಪಿ’(TOP) ಟೊಮೆಟೊ, ಆನಿಯನ್‌(ಈರುಳ್ಳಿ), ಪೊಟ್ಯಾಟೊ (ಆಲೂಗಡ್ಡೆ) ಕೃಷಿಗೆ ಹೆಚ್ಚಿನ ಒತ್ತು ನೀಡುತ್ತೇವೆ’ ಎಂದು ತರಕಾರಿಗಳ ಮೊದಲಾಕ್ಷರಗಳನ್ನು ಪೋಣಿಸಿ ಪ್ರಸ್ತಾಪಿಸಿದ್ದರು.

ಇದಕ್ಕೆ, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆಯಾಗಿರುವ ರಮ್ಯಾ ಪಾಟ್‌(POT) ಎಂದು ಪ್ರತಿಕ್ರಿಯೆ ನೀಡಿದ್ದಲ್ಲದೆ, ‘ನೀವು ನಶೆಯಲ್ಲಿ ಇದ್ದಾಗ ಹೀಗಾಗುತ್ತಾ?’ ಎಂದು ಮೋದಿ ಅವರನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಗ್ಗೇಶ್, ರಮ್ಯಾ ವಿರುದ್ಧ ಕಿಡಿ ಕಾರಿದ್ದಾರೆ.

ಜಗ್ಗೇಶ್ ಟ್ವಿಟರ್‌ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ‘ಮಹಿಳೆಯರನ್ನು ಅವಮಾನಿಸುವುದು ಬಿಜೆಪಿ ಸಂಸ್ಕೃತಿಯೇ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕುತ್ತರಿಸಿದ ಜಗ್ಗೇಶ್, ‘ರಾಷ್ಟ್ರದ ಪ್ರಧಾನಿ, ತಂದೆಯ ವಯಸ್ಕರು, ವಿಶ್ವ ಮೆಚ್ಚಿದ ನಾಯಕರನ್ನು ಅಪಮಾನಿಸಿದವರನ್ನು ಸಮರ್ಥಿಸುವುದು ನಿಮ್ಮ ಸಂಸ್ಕೃತಿಯಾ’ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)