ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ಪತಂಜಲಿಯಿಂದ ಅಪಘಾತ ವಿಮೆ

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಲಾಯಲ್ಟಿ ಕಾರ್ಡ್‌ ಮೂಲಕ ಪತಂಜಲಿ ಉತ್ಪನ್ನಗಳನ್ನು ಖರೀದಿಸುವವರಿಗೆ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಪತಂಜಲಿ ಯೋಗ ಸಮಿತಿ ಮುಖ್ಯಸ್ಥ ಬಾಬಾ ರಾಮದೇವ್‌ ಹೇಳಿದರು.

ಇಲ್ಲಿನ ಎಸ್ಪಿ ವೃತ್ತದಲ್ಲಿರುವ ಪತಂಜಲಿ ಮೆಗಾ ಮಾರ್ಟ್‌ಗೆ ಭೇಟಿ ನೀಡಿದ್ದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಅಪಘಾತದಲ್ಲಿ ಮೃತಪಟ್ಟರೆ ₹5 ಲಕ್ಷ ಹಾಗೂ ಅಂಗವೈಕಲ್ಯಕ್ಕೆ ಒಳಗಾದವರಿಗೆ ₹2.5 ಲಕ್ಷ ವಿಮೆ ಸೌಲಭ್ಯ ನೀಡಲಾಗುವುದು’ ಎಂದರು.

ಪ್ರತಿ ಪತಂಜಲಿ ಮೆಗಾ ಮಾರ್ಟ್‌ಗಳಲ್ಲಿ ಸಾವಿರ ಮಂದಿಗೆ ‘ಲಾಯಲ್ಟಿ ಕಾರ್ಡ್‌’ ಕೊಡುತಿದ್ದು, ಅದರ ಮೂಲಕ ಪತಂಜಲಿ ಉತ್ಪನ್ನಗಳನ್ನು ಖರೀದಿಸುವವರಿಗೆ ಶೇ 5ರಿಂದ 10ರಷ್ಟು ರಿಯಾಯಿತಿ ನೀಡಲಾಗುವುದು. ಈ ಕಾರ್ಡ್‌ ಬೆಲೆ ₹120 ಇರಲಿದೆ. ಇದರ ಮೂಲಕ ₹500ಕ್ಕಿಂತ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿ, ಆರು ತಿಂಗಳು ಕಳೆದವರಿಗೆ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅವರು ವಿವರಿಸಿದರು.

ಈ ಯೋಜನೆಯನ್ನು ಬಳ್ಳಾರಿಯಲ್ಲಿ ಫೆ.22ರಂದು ಮೊದಲಿಗೆ ಪ್ರಾರಂಭಿಸುವ ಆಲೋಚನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT