ಮೋದಿ ಪಶ್ಚಿಮ ಏಷ್ಯಾ ಪ್ರವಾಸ

7

ಮೋದಿ ಪಶ್ಚಿಮ ಏಷ್ಯಾ ಪ್ರವಾಸ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ ಪಶ್ಚಿಮ ಏಷ್ಯಾದ ಮೂರು ರಾಷ್ಟ್ರಗಳಾದ ಪ್ಯಾಲೆಸ್ಟೀನ್‌, ಯುಎಇ ಮತ್ತು ಒಮಾನ್‌ ಪ್ರವಾಸ ಕೈಗೊಳ್ಳಲಿದ್ದಾರೆ.

ಭೇಟಿ ವೇಳೆ ಆ ರಾಷ್ಟ್ರಗಳ ಮುಖಂಡರೊಂದಿಗೆ ನಡೆಸುವ ಮಾತುಕತೆಯಲ್ಲಿ ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ನೀಡುವ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ.

ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಅವರು ದುಬೈನಲ್ಲಿ ನಡೆಯಲಿರುವ ಸರ್ಕಾರಗಳ ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry