ಆರ್‌ಟಿಇ: ವೇಳಾಪಟ್ಟಿ ಪ್ರಕಟ

7

ಆರ್‌ಟಿಇ: ವೇಳಾಪಟ್ಟಿ ಪ್ರಕಟ

Published:
Updated:

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಅರ್ಜಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದ್ದು, ಇದೇ ‌20ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.

2010 ಆಗಸ್ಟ್ 1ರಿಂದ 2011 ಜುಲೈ 31ರೊಳಗೆ ಜನಿಸಿದ ಮಕ್ಕಳು ಮಾತ್ರ ಒಂದನೇ ತರಗತಿಗೆ ಅರ್ಜಿ ಸಲ್ಲಿಸಲು ಅರ್ಹರು. ಎಲ್‌ಕೆಜಿಗೆ ದಾಖಲಾಗಲು 2012ರ ಆಗಸ್ಟ್ 1ರಿಂದ 2013ರ ಜುಲೈ 31ರೊಳಗೆ ಜನಿಸಿದ ಮಕ್ಕಳು ಅರ್ಹರಾಗಿರುತ್ತಾರೆ.

ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ತಂದೆ–ತಾಯಿಯ ಜಾತಿ ಪ್ರಮಾಣ ಪತ್ರ, ವಿಳಾಸ ಗುರುತಿನ ಪತ್ರವನ್ನು ಅರ್ಜಿ ಜೊತೆ  ಅಪ್‌ಲೋಡ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಸಲು www.schooleducation.kar.nic.in ವೆಬ್‌ಸೈಟ್ ಸಂಪರ್ಕಿಸುವಂತೆ ಇಲಾಖೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry