ಶ್ರೀಶಾಂತ್‌ ಮೇಲೆ ಆಜೀವ ನಿಷೇಧ: ಬಿಸಿಸಿಐ ವಿವರಣೆ ಕೇಳಿದ ‘ಸುಪ್ರೀಂ’

7

ಶ್ರೀಶಾಂತ್‌ ಮೇಲೆ ಆಜೀವ ನಿಷೇಧ: ಬಿಸಿಸಿಐ ವಿವರಣೆ ಕೇಳಿದ ‘ಸುಪ್ರೀಂ’

Published:
Updated:
ಶ್ರೀಶಾಂತ್‌ ಮೇಲೆ ಆಜೀವ ನಿಷೇಧ: ಬಿಸಿಸಿಐ ವಿವರಣೆ ಕೇಳಿದ ‘ಸುಪ್ರೀಂ’

ನವದೆಹಲಿ: ಕ್ರಿಕೆಟಿಗ ಎಸ್‌.ಶ್ರೀಶಾಂತ್ ಮೇಲೆ ಆಜೀವ ನಿಷೇಧ ಹೇರಿರುವುದಕ್ಕೆ ಸೂಕ್ತ ವಿವರಣೆ ನೀಡುವಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸುಪ್ರೀಂಕೋರ್ಟ್‌ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೋಮವಾರ, ಆಜೀವ ನಿಷೇಧ ಪ್ರಶ್ನಿಸಿ ಶ್ರೀಶಾಂತ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳ ಒಳಗೆ ವಿವರಣೆ ನೀಡುವಂತೆ ಬಿಸಿಸಿಐ ಮತ್ತು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಇಬ್ಬರು ಸದಸ್ಯರಿಗೆ ಸೂಚಿಸಿತು.

ಶ್ರೀಶಾಂತ್‌ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ರದ್ದು ಮಾಡಿ ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅನುವು ಮಾಡಿಕೊಡಬೇಕೆಂದು ವಕೀಲ ಸಲ್ಮಾನ್‌ ಖುರ್ಷಿದ್‌ ಮನವಿ ಮಾಡಿದರು. ಆದರೆ ಪೀಠ ಇದನ್ನು ತಿರಸ್ಕರಿಸಿತು.

2013ರಲ್ಲಿ ನಡೆದಿದ್ದ ಐಪಿಎಲ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಆಟಗಾರ ಶ್ರೀಶಾಂತ್ ಭಾಗಿಯಾಗಿದ್ದರು. ಹೀಗಾಗಿ ಬಿಸಿಸಿಐ ಅವರ ಮೇಲೆ ನಿಷೇಧ ಹೇರಿತ್ತು. ಇದನ್ನು ಶ್ರೀಶಾಂತ್ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಮಹಮ್ಮದ್‌ ಮುಷ್ತಾಕ್‌ ಅವರಿದ್ದ ಏಕ ಸದಸ್ಯ ಪೀಠ, ಶ್ರೀಶಾಂತ್‌ ದೋಷಮುಕ್ತ ಎಂದು ತೀರ್ಪು ನೀಡಿತ್ತು. ಇದನ್ನು ಬಿಸಿಸಿಐ, ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry