ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ಹೆಚ್ಚು ಅಪರಾಧ

7

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ಹೆಚ್ಚು ಅಪರಾಧ

Published:
Updated:

ತುಮಕೂರು: ‘ದೇಶದಲ್ಲಿ ಹೆಚ್ಚು ಅಪರಾಧಗಳು ನಡೆಯುವ ರಾಜ್ಯಗಳ ಪಟ್ಟಿಯಲ್ಲಿ 1ರಿಂದ 9ರ ವರೆಗಿನ ಸ್ಥಾನಗಳನ್ನು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೇ ಅಲಂಕರಿಸಿವೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವೇ ಪ್ರತಿ ವರ್ಷ ಬಿಡುಗಡೆ ಮಾಡುವ  ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌.ಸಿ.ಆರ್.ಬಿ) ಪುಸ್ತಕದಲ್ಲಿ ಈ ವಿವರಗಳನ್ನು ನೀಡಲಾಗಿದ್ದು, ಬಿಜೆಪಿಯವರು ಇದನ್ನು ಓದಿಕೊಳ್ಳಲಿ’ ಎಂದರು.

‘ನಮ್ಮ ರಾಜ್ಯದಲ್ಲಿ ನಡೆಯುವ ಅ‍ಪರಾಧಗಳಿಗಿಂತ 10 ಪಟ್ಟು ಹೆಚ್ಚು ಅಪರಾಧಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ. ಸದ್ಯಕ್ಕೆ ಹೆಚ್ಚು ಅಪರಾಧ ನಡೆಯುತ್ತಿರುವ ಪಟ್ಟಿಯಲ್ಲಿ ರಾಜ್ಯ 10ನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಶೇ 7ಕ್ಕೆ ಮುಟ್ಟಿತ್ತು. ಆದರೆ ಈಗ ಶೇ 2ರಷ್ಟು ಅಪರಾಧಗಳು ಕಡಿಮೆಯಾಗಿವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry