ಭಾನುವಾರ, ಡಿಸೆಂಬರ್ 8, 2019
24 °C

ಡಿ ಕಾಕ್‌ ಅಲಭ್ಯ

Published:
Updated:
ಡಿ ಕಾಕ್‌ ಅಲಭ್ಯ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಗಾಯಗೊಂಡಿದ್ದು, ಭಾರತದ ಎದುರಿನ ಏಕದಿನ ಸರಣಿಯ ಉಳಿದ ನಾಲ್ಕು ಪಂದ್ಯ ಮತ್ತು ಟಿ–20 ಸರಣಿಯಲ್ಲಿ ಆಡುವುದಿಲ್ಲ.

ಸೆಂಚೂರಿಯನ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಡಿ ಕಾಕ್‌, ಎಡ ಮಣಿಕಟ್ಟಿನ ಗಾಯಕ್ಕೊಳಗಾಗಿದ್ದರು.

ನಾಯಕ ಫಾಫ್‌ ಡುಪ್ಲೆಸಿ ಮತ್ತು ಎಬಿ ಡಿವಿಲಿಯರ್ಸ್‌ ಕೂಡ ಗಾಯ ಗೊಂಡಿದ್ದರು. ಈಗ ಡಿ ಕಾಕ್‌ ಈ ಪಟ್ಟಿಗೆ ಸೇರಿದ್ದಾರೆ. ಇದರಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.

ಡಿ ಕಾಕ್‌ ಅನುಪಸ್ಥಿತಿಯಲ್ಲಿ ಹೆನ್ರಿಕ್‌ ಕ್ಲಾಸೆನ್‌, ಕೇಟ್‌ಟೌನ್‌ನಲ್ಲಿ ಬುಧವಾರ ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್‌ ಕೀಪರ್‌ ಜಬಾಬ್ದಾರಿ ನಿಭಾಯಿಸುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)