ಸೋಮವಾರ, ಡಿಸೆಂಬರ್ 9, 2019
22 °C

ಟಿವಿಎಸ್‌ನಿಂದ ಹೊಸ ಸ್ಕೂಟರ್

Published:
Updated:
ಟಿವಿಎಸ್‌ನಿಂದ ಹೊಸ ಸ್ಕೂಟರ್

ಚೆನ್ನೈ:  ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಿಕಾ ಸಂಸ್ಥೆ ಟಿವಿಎಸ್ ಮೋಟರ್‌, ಈಗ 125 ಸಿಸಿ ಸ್ಕೂಟರ್‌ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಸ್ಕೂಟರ್‌ ‘ಎನ್‌ಟಿಒಆರ್‌ಕ್ಯು’ ಅನ್ನು ಸೋಮವಾರ ಇಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಇದರ ಎಕ್ಸ್‌ಷೋರೂಂ ದೆಹಲಿ ಬೆಲೆ

₹ 58,750 ಇದೆ. ಇದು ಕಂಪನಿಯ ಇತರ ವಾಹನಗಳಾದ ಸ್ಕೂಟಿ ಪೆಪ್‌, ಸ್ಕೂಟರ್‌ ಟಿವಿಎಸ್‌ ಜುಪಿಟರ್‌ಗೆ ಹೊಸದಾಗಿ ಸೇರ್ಪಡೆಯಾಗಿದೆ.

ಆರು ವರ್ಷಗಳಿಂದ ದೇಶದಲ್ಲಿ ಒಟ್ಟಾರೆ ಸ್ಕೂಟರ್‌ ವಿಭಾಗದ ಮಾರುಕಟ್ಟೆಯು ಶೇ 17 ರಷ್ಟು ಏರಿಕೆ ದಾಖಲಿಸುತ್ತಿದೆ ಎಂದು ಕಂಪನಿ ಹೇಳಿದೆ. ‘18ರಿಂದ 24 ವರ್ಷದವರಿಗಾಗಿ ಈ ಹೊಸ ಸ್ಕೂಟರ್‌ ಪರಿಚಯಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ಕೆ. ಎನ್‌. ರಾಧಾಕೃಷ್ಣನ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)