ಐರೋಪ್ಯ ಒಕ್ಕೂಟದ ದೇಶಗಳನ್ನು ಹೊರತುಪಡಿಸಿ ಇತರ ಎಲ್ಲ ದೇಶಗಳ ಪ್ರವಾಸಿಗರಿಗೆ ಇದು ಅನ್ವಯಿಸಲಿದೆ. ಇಂಗ್ಲೆಂಡ್ ಸರ್ಕಾರ 2015ರಲ್ಲಿ ಮೊದಲ ಬಾರಿಗೆ ಸರ್ಚಾರ್ಜ್ ಜಾರಿಗೊಳಿಸಿತ್ತು. ಆಗ ಇದರ ಮೊತ್ತ 200 ಪೌಂಡ್ (₹ 17,951) ಇತ್ತು. ಈಗ ಆ ಮೊತ್ತವನ್ನು 400 ಪೌಂಡ್ಗೆ (₹35,878) ಏರಿಕೆ ಮಾಡಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರವು ಮೊದಲು 150 ಪೌಂಡ್ (₹13,464) ಇದ್ದದ್ದು, ಈಗ 300 (₹31,393) ಪೌಂಡ್ಗೆ ಏರಿಕೆ ಆಗಿದೆ.