ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಮಂಡಲದ ಹೊರಗೆ ಗ್ರಹಗಳ ಗುಂಪು ಪತ್ತೆ

ನಾಸಾದ ಚಂದ್ರ ಎಕ್ಸ್‌–ರೇ ದೂರದರ್ಶಕ ಬಳಕೆ
Last Updated 5 ಫೆಬ್ರುವರಿ 2018, 20:33 IST
ಅಕ್ಷರ ಗಾತ್ರ

ವಾಷಿಂಗ್ಟನ್: ಖಭೌತ ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಸೌರಮಂಡಲದ ಹೊರಗೆ ಹೊಸ ಗ್ರಹಗಳ ಗುಂಪು ಇರುವುದನ್ನು ಪತ್ತೆ ಮಾಡಿದ್ದಾರೆ.

ಅಮೆರಿಕದ ಓಕ್ಲಹಾಮ ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ಸಿನ್ಯುದೈ, ಸಂಶೋಧಕ ಎಡ್ವರ್ಡೊ ಗೆರಸ್ ಅವರು, ಬಾಹ್ಯಾಕಾಶದಲ್ಲಿರುವ ನಾಸಾದ ಚಂದ್ರ ಎಕ್ಸ್‌–ರೇ ದೂರದರ್ಶಕದ ದತ್ತಾಂಶ ಬಳಸಿಕೊಂಡಿದ್ದಾರೆ. ಈ ಗ್ರಹಗಳು ಚಂದ್ರನಿಂದ ಗುರುಗ್ರಹದವರೆಗಿನಷ್ಟು ದ್ರವ್ಯರಾಶಿ ಹೊಂದಿವೆ. ದಿ ಆಸ್ಟ್ರೊಫಿಸಿಕಲ್ ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

‘ಈ ಗ್ರಹಗಳನ್ನು ಪತ್ತೆ ಮಾಡಿರುವ ಕುರಿತು ನಮಗೆ ಸಂತಸವಾಗಿದೆ. ಸೌರಮಂಡಲದ ಹೊರಗೆ ಗ್ರಹಗಳನ್ನು ಪತ್ತೆ ಮಾಡಿರುವುದು ಇದೇ ಮೊದಲು’ ಎಂದು ದೈ ಹೇಳಿದ್ದಾರೆ.

‘ಈ ಗ್ರಹಗಳು 380 ಕೋಟಿ ಜ್ಯೋತಿರ್‌ ವರ್ಷಗಳಷ್ಟು ದೂರದಲ್ಲಿವೆ. ವೈಜ್ಞಾನಿಕ ಕಥನಗಳಲ್ಲಿ ಕಲ್ಪನೆ ಮಾಡಿಕೊಳ್ಳಬಹುದಾದ ಅತ್ಯುತ್ತಮ ದೂರದರ್ಶಕದಿಂದಲೂ ಸಹ ಇವುಗಳನ್ನು ವೀಕ್ಷಿಸುವುದು ಸಾಧ್ಯವಿಲ್ಲ. ನಾವು ಈ ಗ್ರಹಗಳನ್ನು ಪತ್ತೆ ಮಾಡಿ ಅಧ್ಯಯನ ಮಾಡಲು, ಅವುಗಳ ದ್ರವ್ಯರಾಶಿ ತಿಳಿದುಕೊಳ್ಳಲು ಸಾಧ್ಯವಾಯಿತು‘ ಎಂದು ಗೆರಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT