ಬಶೀರ್‌ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

7

ಬಶೀರ್‌ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

Published:
Updated:

ಮಂಗಳೂರು: ಜನವರಿ 3ರಂದು ಕಾಟಿಪಳ್ಳದ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿ ಯಲ್ಲಿ ನಡೆದಿದ್ದ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಕೊಲೆ ಪ್ರಕರ ಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋ ಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಬಂಟ್ವಾಳ ತಾಲ್ಲೂಕಿನ ನೀರ್ಕಜೆ ಸಮೀ‍ಪದ ಕೇಪು ಗ್ರಾಮದ ಬಡಕೋಡಿ ಮನೆಯ ರಮೇಶ್ ಪೂಜಾರಿ ಎಂಬು ವವರ ಮಗ ಅಭಿ ಅಲಿಯಾಸ್‌ ಅಭಿ ಷೇಕ್‌ ಆರ್‌.ಎಸ್‌. (21) ಬಂಧಿತ ಆರೋಪಿ. ಕಾವೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ ನೇತೃತ್ವದ ವಿಶೇಷ ತಂಡ ಸೋಮವಾರ ಸಂಜೆ ಪುತ್ತೂರು ತಾಲ್ಲೂಕಿನ ಬನ್ನೂರು ಎಂಬಲ್ಲಿ ಆರೋಪಿಯನ್ನು ಬಂಧಿ ಸಿದೆ. ಯುವಕನನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ನಗರ ಅಪರಾಧ ದಾಖಲೆಗಳ ವಿಭಾಗದ ಎಸಿಪಿ ವೆಲೆಂಟೈನ್‌ ಡಿಸೋಜ ವಶಕ್ಕೆ ನೀಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್ ತಿಳಿಸಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ಕಿಶನ್‌ ಪೂಜಾರಿ, ಶ್ರೀಜಿತ್‌, ಧನುಷ್ ಪೂಜಾರಿ, ಸಂದೇಶ್ ಕೋಟ್ಯಾನ್‌, ಪುಷ್ಪರಾಜ್‌ ಮತ್ತು ಲತೇಶ್ ಎಂಬು ವವರನ್ನು ಮೊದಲು ಬಂಧಿಸಲಾಗಿತ್ತು. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಮಿಥುನ್‌ ಅಲಿಯಾಸ್‌ ಕಲ್ಲಡ್ಕ ಮಿಥುನ್, ತಿಲಕ್‌ರಾಜ್‌, ರಾಜು ಅಲಿಯಾಸ್‌ ರಾಜೇಶ್‌ ಮತ್ತು ಬಶೀರ್‌ ಅವರನ್ನು ತೋರಿಸಿದ್ದ ಅನೂಪ್‌ ಎಂಬಾತನನ್ನು ನಂತರ ಕೊಲೆಯ ಸಂಚಿನಲ್ಲಿ ಭಾಗಿಯಾ ದ ಆರೋಪದ ಮೇಲೆ ಬಂಧಿಸಲಾಗಿತ್ತು.

ಆರೋಪಿ ಅಭಿಷೇಕ್‌ ಬಂಧನ ಕಾರ್ಯಾಚರಣೆಯಲ್ಲಿ ಕಾವೂರು ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗಳಾದ ಯಶವಂತ ಗೌಡ, ಬಾಲಕೃಷ್ಣ, ದುರ್ಗಾಪ್ರಸಾದ್ ಶೆಟ್ಟಿ, ವಿಶ್ವನಾಥ, ರಾಜಶೇಖರಗೌಡ, ಪ್ರಮೋದ, ಕಾನ್‌ ಸ್ಟೆಬಲ್‌ಗಳಾದ ಕೇಶವ, ಚೆರಿಯನ್, ರಶೀದ್ ಶೇಖ್, ವಿನಯಕುಮಾರ್ ಎಚ್‌.ಕೆ. ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry