ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್‌ ಬಿಕ್ಕಟ್ಟು: ಮಾಜಿ ಅಧ್ಯಕ್ಷ ಮಾವುಮೂನ್ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್ ಬಂಧನ

Last Updated 6 ಫೆಬ್ರುವರಿ 2018, 6:31 IST
ಅಕ್ಷರ ಗಾತ್ರ

ಮಾಲಿ/ ಮಾಲ್ಡೀವ್ಸ್‌: ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಕೆಲವೇ ಗಂಟೆಗಳಲ್ಲೇ ಮಾಜಿ ಅಧ್ಯಕ್ಷ  ಮಾವುಮೂನ್ ಅಬ್ದುಲ್ ಗಯೂಮ್ ಮತ್ತು ಅವರ ಅಳಿಯನನ್ನು ಮಾಲ್ಡೀವ್ಸ್‌ ಪೊಲೀಸರು ಬಂಧಿಸಿದ್ದಾರೆ.

ಇವರ ಜತೆಗೆ ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್, ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಅಲಿ ಹಮೀದ್ ಹಾಗೂ ನ್ಯಾಯಾಂಗ ಆಡಳಿತಾಧಿಕಾರಿ ಹಸನ್ ಸಯೀದ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇದರಿಂದ ಮಾಲ್ಡೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಂತಾಗಿದೆ.

ಈ ಬಗ್ಗೆ ಮಾಲ್ಡೀವ್ಸ್ ಸಂಸತ್ತಿನ ಮಾಜಿ ಸ್ಪೀಕರ್ ಅಬ್ದುಲ್ಲಾ ಶಾಹೀದ್ ಅವರು ಟ್ವೀಟ್ ಮಾಡುವ ಮೂಲಕ  ಬಂಧನದ ವಿಚಾರವನ್ನು ಖಚಿತಪಡಿಸಿದ್ದಾರೆ.

ಮಾಜಿ ಅಧ್ಯಕ್ಷ  ಮಾವುಮೂನ್ ಅಬ್ದುಲ್ ಗಯೂಮ್ ಹಾಗೂ ಅವರ ಅಳಿಯನ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಮಾಲ್ಡೀವ್ಸ್‌ ಪೊಲೀಸರು ತಮ್ಮ ವಿಶೇಷ ಕಾರ್ಯಾಚರಣೆ ಮೂಲಕ ಈ ಇಬ್ಬರನ್ನು ಬಂಧಿಸಿದ್ದಾರೆ. #MaldivesInCrisis #StateOfEmergency ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT